ಜೀವನದಲ್ಲಿ ನಿಮ್ಮ ಹತ್ತಿರ ಕ್ಯಾನ್ಸರ್ ಖಾಯಿಲೆ ಬಾರದೆಂದರೆ ಹೀಗೆ ಮಾಡಿ..!

ದೇಹದಲ್ಲಿ ನಿರ್ದಿಷ್ಟ ಭಾಗದಲ್ಲಿನ ಕಣಗಳು ಚೆನ್ನಾಗಿ ಬೆಳೆದು ಗಡ್ಡೆಯಂತೆ ಬದಲಾದರೆ ಆಗ ಆ ಭಾಗಕ್ಕೆ ಕ್ಯಾನ್ಸರ್ ಸೋಕಿದೆ ಎನ್ನುತ್ತಾರೆ. ಆದರೆ ಎಲ್ಲಾ ಗಡ್ಡೆಗಳು ಕ್ಯಾನ್ಸರ್ ಗಡ್ಡೆಗಳು ಅಲ್ಲ. ದಿನಗಳು ಉರುಳಿದಂತೆ ಗಡ್ಡೆಯ ಗಾತ್ರದಲ್ಲಿ ಬದಲಾವಣೆ ಬಂದರೂ, ನೋವು ಇದ್ದರೂ ಅದನ್ನು ಕ್ಯಾನ್ಸರ್ ಗಡ್ಡೆಯಾಗಿ ಅನುಮಾನಿಸಬೇಕು. ಆದರೆ ಬಹಳಷ್ಟು ಕ್ಯಾನ್ಸರ್‌ಗಳನ್ನು ಆರಂಭದ ಹಂತದಲ್ಲೇ ಗುರುತಿಸಿದರೆ ಚಿಕಿತ್ಸೆ ನೀಡುವುದು ಸುಲಭವಾಗುತ್ತದೆ. ಇದರ ಜತೆಗೆ ಕೆಳಗೆ ಸೂಚಿಸಿರುವ ಕೆಲವು ಆಹಾರ ಪದಾರ್ಥಗಳನ್ನು ನಿತ್ಯ ತೆಗೆದುಕೊಂಡರೆ ಇದರಿಂದ ಕ್ಯಾನ್ಸರ್ ಬಾರದಂತೆ ನೋಡಿಕೊಳ್ಳಬಹುದು. ಹಾಗಿದ್ದರೆ ಆ ಆಹಾರ ಏನು ಎಂಬುದನ್ನು ಈಗ ನೋಡೋಣ.

  1. ಅರಿಶಿಣದಲ್ಲಿ ನಮ್ಮ ದೇಹಕ್ಕೆ ಉಪಯೋಗವಾಗುವ ಔಷಧಿ ಗುಣಗಳು ಸಾಕಷ್ಟಿವೆ. ಅರಿಶಿಣದಲ್ಲಿರುವ ಕರ್‌ಕ್ಯೂಮಿನ್ ಆಂಟಿ ಆಕ್ಸಿಡೆಂಟ್, ಆಂಟಿ ಇನ್‍ಫ್ಲಾಮೇಟರಿ ಏಜೆಂಟ್ ರೀತಿ ಕೆಲಸ ಮಾಡುತ್ತದೆ. ಅಷ್ಟೇ ಅಲ್ಲ, ಆಂಟಿ ಕ್ಯಾನ್ಸರ್ ಔಷಧಿಯಾಗಿ ಸಹ ಅರಿಶಿಣ ಕೆಲಸ ಮಾಡುತ್ತದೆ. ಇದರಿಂದ ಕ್ಯಾನ್ಸರ್ ಕಣಗಳು ಬೆಳೆಯದಂತೆ ನೋಡಿಕೊಳ್ಳುತ್ತದೆ. ನಿತ್ಯ ಆಹಾರದಲ್ಲಿ 3 ಟೀ ಸ್ಫೂನ್ ಅರಿಶಿಣ ಬಳಸಿದರೆ ಕ್ಯಾನ್ಸರ್ ಬಾರದಂತೆ ನೋಡಿಕೊಳ್ಳಬಹುದು.
  2. ಬೆಳ್ಳುಳ್ಳಿಯಲ್ಲಿ ಅಲಿಸಿನ್ ಎಂಬ ಸಂಯೋಜನೆ ಇರುತ್ತದೆ. ಇದು ಕ್ಯಾನ್ಸರ್ ಕಣಗಳನ್ನು ನಾಶ ಮಾಡುತ್ತದೆ. ನಿತ್ಯ ನಾವು ತೆಗೆದುಕೊಳ್ಳುವ ಆಹಾರದಲ್ಲಿ 2 ರಿಂದ 5 ಗ್ರಾಂ ಬೆಳ್ಳುಳ್ಳಿ ಇರುವಂತೆ ನೋಡಿಕೊಂಡರೆ ಸಾಕು, ಕ್ಯಾನ್ಸರ್ ಬಾರದಂತೆ ತಡೆಯಬಹುದು.
  3. ನಿತ್ಯ ಬೆಳಗ್ಗೆ ತೆಗೆದುಕೊಳ್ಳುವ ಆಹಾರದಲ್ಲಿ ಸ್ವಲ್ಪ ಶುಂಠಿ ತೆಗೆದುಕೊಂಡರೆ ಕ್ಯಾನ್ಸರ್ ಬಾರದಂತೆ ನೋಡಿಕೊಳ್ಳಬಹುದು.
  4. ಬ್ಲೂಬೆರ್ರಿಗಳು, ಸ್ಟ್ರಾ ಬೆರ್ರಿಗಳು, ರಾಸ್‌ಬೆರ್ರಿಗಳು ಆಹಾರದ ಭಾಗವಾಗಿ ನೋಡಿಕೊಂಡರೆ ಅವು ಕ್ಯಾನ್ಸರ್ ಕಣಗಳನ್ನು ನಾಶ ಮಾಡುತ್ತವೆ.
Share Post

Leave a Reply

Your email address will not be published. Required fields are marked *

error: Content is protected !!