ಕರ್ನಾಟಕ 19 ಜನ ಐಪಿಎಸ್​ ಅಧಿಕಾರಿಗಳ ದಿಢೀರ್​ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರ..!

ಬೆಂಗಳೂರು: ರಾಜ್ಯ ಪೊಲೀಸ್​ ಇಲಾಖೆಯಲ್ಲಿ ದಿಢೀರ್​ 19 ಜನ ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಈ ಮೂಲಕ ಪೊಲೀಸ್ ಇಲಾಖೆಯಲ್ಲಿ ಬಾರಿ ಬದಲಾವಣೆಗೆ ಸರ್ಕಾರ ಮುಂದಾಗಿದೆ.

ಅಲೋಕ್​ಕುಮಾರ್ ಅವರನ್ನು ಬೆಂಗಳೂರು ನಗರ ಪೊಲೀಸ್ ಕಮೀಷನರ್ ಆಗಿ ನೇಮಕ ಮಾಡಲಾಗಿದ್ದು, ಟಿ.ಸುನೀಲ್​ಕುಮಾರ್​ರನ್ನು ನೇಮಕಾತಿ ವಿಭಾಗದ ಎಡಿಜಿಪಿಯಾಗಿ, ಅಮ್ರಿತ್​ ಪೌಲ್​ ಪಶ್ಚಿಮ ವಲಯ ಐಜಿಪಿ, ಉಮೇಶ್​ಕುಮಾರ್​ ಪಶ್ಚಿಮ ವಲಯದ ಹೆಚ್ಚುವರಿ ಪೊಲೀಸ್ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿದೆ.

ಗೃಹ ಇಲಾಖೆಯ ಕಾರ್ಯದರ್ಶಿಯನ್ನಾಗಿ ಬಿ.ಕೆ.ಸಿಂಗ್​ರನ್ನು ವರ್ಗಾವಣೆ ಮಾಡಲಾಗಿದ್ದು, ಸೌಮೆಂದು ಮುಖರ್ಜಿ ಆಂತರಿಕ ಭದ್ರತಾ ವಿಭಾಗದ ಐಜಿಪಿ, ರಾಘವೇಂದ್ರ ಸುಹಾಸ್ ದಕ್ಷಿಣ ವಲಯ ಐಜಿಪಿ, ರವಿಕಾಂತೆಗೌಡ ಸಿಸಿಬಿ ಜಂಟಿ ಆಯುಕ್ತ, ರಾಮ್ ನಿವಾಸ್ ಸೆಪಟ್ ಎಸಿಬಿ ಎಸ್​ಪಿ, ಎಂ.ಎನ್.ಅನುಚೇತ್ ರೈಲ್ವೆ ಎಸ್​ಪಿ ಆಗಿ ವರ್ಗಾವಣೆ ಮಾಡಲಾಗಿದೆ.

ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿಯಾಗಿದ್ದ ರವಿ ಡಿ.ಚನ್ನಣ್ಣನವರ್ ಸಿಐಡಿ ಎಸ್​ಪಿ, ಬಿ.ರಮೇಶ್ ಬೆಂಗಳೂರು ಪಶ್ಚಿಮ ವಿಭಾಗ ಡಿಸಿಪಿ, ಸಿ.ಬಿ.ರಿಶ್ಯಂತ್ ಮೈಸೂರು ಎಸ್​ಪಿಯಾಗಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಅಮಿತ್ ಸಿಂಗ್ ಸಿವಿಲ್ ಡಿಫೆನ್ಸ್ ಮತ್ತು ಹೋಮ್ ಗಾರ್ಡ್ ವಿಭಾಗದ ಎಸ್​ಪಿ, ಡಾ,ಭೀಮಾಶಂಕರ್ ಎಸ್ ಗುಳೇದ್ ಬೆಂಗಳೂರು ಈಶಾನ್ಯ ವಿಭಾಗ ಡಿಸಿಪಿ, ಮಹ್ಮದ್ ಸುಜೀತಾ ಕೆಜಿಎಫ್ ಎಸ್​ಪಿ, ಟಿಪಿ ಶಿವಕುಮಾರ್, ಬೆಂಗಳೂರು ಗ್ರಾಮಾಂತರ ಎಸ್​ಪಿ, ಎನ್.ವಿಷ್ಣುವರ್ಧನ ಬೆಂಗಳೂರು ಅಡಳಿತ ವಿಭಾಗದ ಡಿಸಿಪಿ, ಕಲಾ ಕೃಷ್ಣ ಸ್ವಾಮಿ ಎಫ್​ಎಸ್ಎಲ್ ನಿರ್ದೇಶಕರಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

Share Post

Leave a Reply

error: Content is protected !!