ಭಾರತೀಯ ಪ್ರಜೆಯಾಗಿ ನನಗೆ ಕೇಳೋ ಹಕ್ಕಿದೆ. ಹರ್ಷಿಕಾ ಪೂಣಚ್ಚ

ಬೆಂಗಳೂರು: ಸಚಿವ ಸಾ.ರಾ.ಮಹೇಶ್ ಟೀಕೆಗೆ ನಟಿ ಹರ್ಷಿಕಾ ಪೂಣಚ್ಚ ಸ್ಪಷ್ಟನೆ ಕೊಟ್ಟಿದ್ದು, ಕೊಡಗಿನ ಹುಡುಗಿಯಾಗಿ ಕೇಳೋ ಅಧಿಕಾರ ನಮಗಿದೆ ಎಂದಿದ್ದಾರೆ.

ನಾನು ಹೇಳಿದ ಮಾತು ಹೇಗಾಗಿದೆ ಅಂದ್ರೆ, ಇದ್ದದ್ದನ್ನ ಇದ್ದ ಹಾಗೆ ಹೇಳಿದ್ರೆ, ಎದ್ದು ಬಂದು ಎದೆಗೆ ಒದ್ರಂತೆ ಎಂದ ಹಾಗಿದೆ. ನಾನು ಇಂಜಿನಿಯರಿಂಗ್ ಪದವಿಧರೆ. ಭಾರತೀಯ ಪ್ರಜೆಯಾಗಿ ನನಗೆ ಕೇಳೋ ಹಕ್ಕಿದೆ. ಸಿನಿಮಾದವರು ಬರೀ ಸಿನಿಮಾ ಬಿಟ್ಟು ಬೇರೆ ಮಾತನಾಡಬಾರದು ಎಂದೇನಿಲ್ಲ ಎಂದಿದ್ದಾರೆ.

ಅಲ್ಲದೇ, ಅಲ್ಲಿ ನಿರ್ಮಾಣ ಮಾಡಿರೋ ಮನೆಗಳು ಶೀಟ್ ಮನೆಗಳು.ಅಷ್ಟು ಚನ್ನಾಗಿ ಗಾಳಿ ಬೆಳಕು ಸರಿಯಾಗಿ ಇಲ್ಲ. ಸರ್ಕಾರ ಒಳ್ಳೆಯ ಮನೆ ನಿರ್ಮಾಣ ಮಾಡಿ ಕೊಡಲಿ ಎಂದು ಹೇಳಿದ್ದು ತಪ್ಪಾ..? ನಾನು ಯಾರನ್ನೂ ದೂಷಿಸಿಲ್ಲ. ಕೊಡಗಿನ ಹುಡುಗಿಯಾಗಿ ಕೇಳೋ ಅಧಿಕಾರ ನಮಗಿದೆ ಎಂದಿದ್ದಾರೆ.

Share Post

Leave a Reply

error: Content is protected !!