ಸುಮಲತಾ ಗೆಲ್ತಾರೆ,ದೇವೇಗೌಡ್ರು ಸೋಲ್ತಾರೆ ಕೊನೆಗೂ ಗದಗದ ಜೋಗಮ್ಮ ಹೇಳಿದ ಭವಿಷ್ಯ ನಿಜವಾಯ್ತು!!!

ಹುಬ್ಬಳ್ಳಿ : ಇತ್ತೀಚಿಗೆ ರಾಜ್ಯದಲ್ಲಿ ನಡೆದ ಲೋಕಸಭೆ ಚುನಾವಣೆಯ ಕುರಿತಂತೆ ಗದಗ ಮೂಲದ ಅಜ್ಜಿ (ಜೋಗಮ್ಮ) ಹೇಳಿದ ಭವಿಷ್ಯದ ವಿಡಿಯೋ ವೈರಲ್ ಆಗಿತ್ತು. ಆಗ ಭವಿಷ್ಯ ನುಡಿದಿದ್ದ ಜೋಗಮ್ಮ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಗೆಲುವನ್ನು ಸಾಧಿಸುತ್ತಾರೆ ಮತ್ತು ದೇವೇಗೌಡರು ಸೋತು ಮನೆಗೆ ಹೋಗುತ್ತಾರೆ ಎಂಬ ಭವಿಷ್ಯವನ್ನು ನುಡಿದ್ದರು. ಆ ಭವಿಷ್ಯ ಕೂಡ ಇಂದು ನಿಜವಾಗಿದೆ.

ಮಂಡ್ಯ ನೂತನ ಸಂಸದೆ ಸುಮಲತಾ ಅಂಬರೀಶ್ ಇಂದು ತಮ್ಮ ಮಗನಾದ ಅಭಿಷೇಕ್ ಗೌಡ ಅಭಿನಯದ ಅಮರ ಚಿತ್ರದ ಪ್ರಚಾರಕ್ಕೆ ಹುಬ್ಬಳ್ಳಿಗೆ ಆಗಮಿಸಿದ್ದರು. ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹುಬ್ಬಳ್ಳಿಗೆ ಆಗಮಿಸಿದ್ದ ಹಿನ್ನೆಲೆಯಲ್ಲಿ ಅವರನ್ನು ಭೇಟಿಯಾಗಲು ಬಂದಿದ್ದ ಗದಗ ಮೂಲದ ಅಜ್ಜಿ ಜೋಗಮ್ಮ ಮಾಧ್ಯಮದ ಮುಂದೆ ತಮ್ಮ ಅನಿಸಿಕೆ ಹಂಚಿಕೊಂಡರು. ಸುಮಲತಾ ಅವರು ನನ್ನನ್ನು ಗುರುತು ಹಿಡಿದಿದ್ದಾರೆ ಮತ್ತು ನೀವು ಹೇಳಿದ ಮಾತುಗಳನ್ನು ಟಿವಿಯಲ್ಲಿ ಮತ್ತು ಮೊಬೈಲ್ ನಲ್ಲಿ ನೋಡಿದ್ದೇನೆ, ನೀವು ಒಂದು ಸಾರಿ ಮಂಡ್ಯಕ್ಕೆ ಬಂದು ಹೋಗಿ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ ಎಂದು ಜೋಗಮ್ಮ ತಿಳಿಸಿದರು.

Share Post

Leave a Reply

Your email address will not be published. Required fields are marked *

error: Content is protected !!