ದೊಡ್ಡಬಳ್ಳಾಪುರ : ರಾಜಘಟ್ಟ ಆಂಜನೇಯ ದೇವಸ್ಥಾನಕ್ಕೆ ಸಂಸದ ಬಜ್ಜೇಗೌಡ ಭೇಟಿ

ದೊಡ್ಡಬಳ್ಳಾಪುರ : ದೊಡ್ಡಬಳ್ಳಾಪುರದ ರಾಜಘಟ್ಟ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಆಗಮಿಸಿದ ಸಂಸದ ಬಿ.ಎನ್.ಬಚ್ಚೇಗೌಡ ದೇವಸ್ಥಾನದ ಪಕ್ಕದಲ್ಲೇ ಇದ್ದ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆಗೆ ಭೇಟಿ‌ ನೀಡಿದರು.

ಶಾಲೆಯಲ್ಲಿದ್ದ ಮಕ್ಕಳೊಂದಿಗೆ ಮಾತನಾಡಿದರು. ಶಾಲೆಯ ಬಗ್ಗೆ ತಿಳಿದು ಹರ್ಷವ್ಯಕ್ತಪಡಿಸಿದರು. ಬಳಿಕ ಮಕ್ಕಳನ್ನುದ್ದೇಶಿಸಿ ಮಾತನಾಡಿದ ಸಂಸದ ಬಚ್ಚೇಗೌಡ ಈ ಶಾಲೆಗೆ ಸುಮಾರು 50 ವರ್ಷಗಳ ಇತಿಹಾಸವಿದೆ,ಇಲ್ಲಿರುವ ಎಲ್ಲಾ ಮಕ್ಕಳು ಚೆನ್ನಾಗಿ ಓದಿ,ಒಳ್ಳೆಯ ಪ್ರಜೆಗಳಾಗಬೇಕು. ದೇಶ ನಿಮ್ಮ ಕೈಯಲ್ಲಿದೆ. ನೀವುಗಳೇ ದೇಶದ ಆಸ್ತಿ ಎಂದರು.

ಮಕ್ಕಳೊಂದಿಗೆ ಮಾತನಾಡಿದ ಬಳಿಕ ಸಂಸದ ಬಚ್ಚೇಗೌಡ ದೇವಸ್ಥಾನದ ಕಡೆಗೆ ಭೇಟಿ ನೀಡಿದರು. ಶ್ರೀಆಂಜನೇಯಸ್ವಾಮಿ ದೇವಸ್ಥಾನದಲ್ಲಿ ದೇವರಿಗೆ ನಮಸ್ಕರಿಸಿ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗಿಯಾದ್ದರು. ಇದಕ್ಕೂ ಮುಂಚೆ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಬಚ್ಚೇಗೌಡ ಇಂದು ಹೊಸಕೋಟೆಯಲ್ಲಿ ನಡೆದ ಗಲಾಟೆಯ ಬಗ್ಗೆ ವಿವರಣೆ ನೀಡಿದರು. ಇಂದು ಹೊಸಕೋಟೆಯಲ್ಲಿ ನಡೆದ ನೂತನ ಬಸ್ ನಿಲ್ದಾಣಕ್ಕೆ ತಮ್ಮನ್ನು ಕಾಟಾಚಾರಕ್ಕೆಂದು ಆಹ್ವಾನಿಸಿದ ಬಗ್ಗೆ ನಡೆದ ಬಿಜೆಪಿ ಭಾರೀ ಪ್ರತಿಭಟನೆಯಲ್ಲಿ ಪುತ್ರ ಶರತ್ ಬಚ್ಚೇಗೌಡರವರನ್ನು ಪೊಲೀಸರು ಬಂಧಿಸಿರುವ ಬಗ್ಗೆ ವಿಷಯ ತಿಳಿದು ನನಗೂ ನೋವಾಗಿದೆ ಎಂದರು. ಇದೆಲ್ಲಾ ಅಲ್ಲಿನ ಸ್ಥಳೀಯ ಶಾಸಕರೇ ಕಾರಣ,ಆ ಸ್ಥಳೀಯ ಶಾಸಕರ ಪಿತೂರಿಯಿಂದ ನಮ್ಮವರ ಮೇಲೆ ದರ್ಪ ತೋರಿಸುತ್ತಿದ್ದಾರೆ ಎಂದು ಅಧಿಕಾರಿಗಳ ಮೇಲೆ ಹಾಗೂ ಶಾಸಕರ‌ ಮೇಲೆ‌ ಬೇಸರ ವ್ಯಕ್ತಪಡಿಸಿದರು. ಯಾವುದೇ ಸರ್ಕಾರಿ ಕಾರ್ಯಕ್ರಮದಲ್ಲೂ ನಮ್ಮನ್ನು ಪರಿಗಣಿಸದೇ ಇರುವುದಕ್ಕೆ ಕಾರ್ಯಕರ್ತರಲ್ಲೂ ‌ನೋವಿದೆ. ಅದನ್ನು ಕೇಳೋದಕ್ಕೆ ಹೋಗಿದ್ದರೆ ಸ್ಥಳೀಯರ ಸಹಕಾರದಿಂದ ನಮ್ಮವರನ್ನೆಲ್ಲಾ ಬಂಧಿಸಿ ಅವರಿಗೆ ಇಷ್ಟ ಬಂದ ಹಾಗೆ ನಡೆದುಕೊಳ್ಳುತ್ತಿದ್ದಾರೆ, ಇದೊಂದು ದುರಂತ ಎಂದು ನೂತನ ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದರಾದ ಬಚ್ಚೇಗೌಡ ಬೇಸರ ವ್ಯಕ್ತಪಡಿಸಿದರು.

ಇನ್ನು ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕೇಂದ್ರ ರೇಷ್ಮೆಮಂಡಳಿ ಅಧ್ಯಕ್ಷರಾದ ಹನುಮಂತರಾಯಪ್ಪ ಹಾಗೂ ನರಸಿಂಹಸ್ವಾಮಿ ಮತ್ತು ಬಿಜೆಪಿ ಕಾರ್ಯಕರ್ತರು ನೂತನ ಸಂಸದರಾದ ಬಿ.ಎನ್. ಬಚ್ಚೇಗೌಡರವರಿಗೆ ಸನ್ಮಾನಿಸುವ  ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಕೂಡ ನೂರಾರು ಜನರ ಕಾರ್ಯಕರ್ತರ ಸಮ್ಮುಖದಲ್ಲೇ ಆದ್ದೂರಿಯಾಗಿ ನಡೆದಿದ್ದು‌ ವಿಶೇಷವಾಗಿತ್ತು.

Share Post

Leave a Reply

Your email address will not be published. Required fields are marked *

error: Content is protected !!