ಇನ್ನೋವಾ ಕಾರು ಡಿಕ್ಕಿ : ಇಬ್ಬರು ಪಾದಚಾರಿಗಳ ದುರ್ಮರಣ

ಹೊಸಕೋಟೆ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಸೈಯದ್ ಪ್ಯಾಲೇಸ್ ಮುಂಭಾಗದಲ್ಲಿ ರಸ್ತೆದಾಟುತ್ತಿದ್ದ ಪಾದಚಾರಿಗಳಿಗೆ ಕಾರು ಡಿಕ್ಕಿ ಹೊಡೆದು ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ.

ರಾಷ್ಟ್ರೀಯ ಹೆದ್ದಾರಿ-75ರಲ್ಲಿರುವ ಸೈಯದ್ ಪ್ಯಾಲೇಸ್ ಮುಂಭಾಗದಲ್ಲಿ ರಸ್ತೆದಾಟುತ್ತಿದ್ದ ಪಾದಚಾರಿಗಳಿಗೆ ಕೋಲಾರ ಕಡೆಯಿಂದ ಬಂದ ಇನ್ನೋವಾ ಕಾರು ಡಿಕ್ಕಿಯಾಗಿದ್ದರಿಂದ ಇಬ್ಬರು ಯುವಕರು ಸಾವಿಗೀಡಾಗಿದ್ದಾರೆ. ನಿನ್ನೆ ಶುಕ್ರವಾರದಂದು ರಾತ್ರಿ 10:30ರ   ಸಮಯದಲ್ಲಿ ತರಕಾರಿ ತುಂಬಿಕೊಂಡು ಕೋಲಾರ ಜಿಲ್ಲೆಯ ನರಸಾಪುರ ಹೋಬಳಿಯ ದಿನ್ನೆಹೊಸಹಳ್ಳಿ ಗ್ರಾಮದ ರಾಜಣ್ಣ, ಮುನೇಗೌಡ ಬೈರಪ್ಪ ಎಂಬುವವರು ಬರುತ್ತಿದ್ದರು. ಹೊಸಕೋಟೆ ಹೊರವಲಯದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸೈಯದ್ ಪ್ಯಾಲೇಸ್ ಮುಂಭಾಗದಲ್ಲಿ ವಾಹನವನ್ನು ನಿಲ್ಲಿಸಿ ಊಟಮಾಡಲೆಂದು ಮುಂದುಗಡೆ ಇರುವ ಹೋಟೆಲಿಗೆ ಹೋಗಲು ರಸ್ತೆ ದಾಟುವಾಗ ಕೋಲಾರ ಕಡೆಯಿಂದ ಬಂದ ಇನ್ನೋವಾ ಕಾರು ಗುದ್ದಿ ರಾಜಣ್ಣ(36) ಹಾಗೂ ಮುನೇಗೌಡ(34) ಸ್ಥಳದಲ್ಲಿಯೇ ಮೃತಹೊಂದಿದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಹೊಸಕೋಟೆ ಪೋಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!