ಮಕ್ಕಳನ್ನು ಶಾಲೆಗೆ ಕಳಿಸಿದ್ರೆ ಪೋಷಕರಿಗೆ 15 ಸಾವಿರ : ಬಂಪರ್ ಆಫರ್ ಕೊಟ್ಟ ಸಿಎಂ

ಗುಂಟೂರು : ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಪೋಷಕರಿಗೆ ಭರ್ಜರಿ ಆಫರ್ ನೀಡಿದ್ದಾರೆ. ಮಕ್ಕಳನ್ನು ಶಾಲೆಗೆ ಕಳಿಸುವ ಪೋಷಕರಿಗೆ ಸರ್ಕಾರದಿಂದ ಜನವರಿ 26ಕ್ಕೆ 15 ಸಾವಿರ ರು.ನೀಡುವುದಾಗಿ ಘೋಷಿಸಿದ್ದಾರೆ. 

ಪೆನುಮಕ ಜಿಲ್ಲಾ ಪರಿಷತ್ ನಿಂದ ಏರ್ಪಡಿಸಿದ್ದ  ಅಕ್ಷರ ಅಭಿಯಾನದಲ್ಲಿ ಪಾಲ್ಗೊಂಡಿದ್ದ ಸಿಎಂ ಪ್ರತೀ ಮಕ್ಕಳನ್ನು ಶಾಲೆಗೆ ಕಳುಹಿಸಿ ಸಾಕ್ಷರರನ್ನಾಗಿ ಮಾಡಬೇಕು ಎಂದರು. 

ನಿಮ್ಮ ಮಕ್ಕಳ ಅಭಿವೃದ್ಧಿ ದೃಷ್ಟಿಯಿಂದ ಶಾಲೆಗೆ ಕಳುಹಿಸುವ ಅಗತ್ಯವಿದೆ. ಪ್ರತಿ ಮಕ್ಕಳು ವೈದ್ಯರು, ಇಂಜಿನಿಯರ್, ಐಎಎಸ್ ಅಧಿಕಾರಿಗಳಾಗುವ ಕನಸು ಕಾಣಲಿ ಎಂದು ಆಶಿಸಿದರು. 

ರಾಜ್ಯದಲ್ಲಿ ಒಟ್ಟು ನಲವತ್ತು ಸಾವಿರ ಸರ್ಕಾರಿ ಶಾಲೆಗಳಿದ್ದು, ಎಲ್ಲಾ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ಆರಂಭ ಮಾಡಲಾಗುತ್ತಿದೆ. ಅಲ್ಲದೇ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲಾಗುತ್ತದೆ. ಇನ್ನು ಎರಡು ವರ್ಷಗಳಲ್ಲಿ ಶಾಲೆಗಳ ಸಂಪೂರ್ಣ  ಅಭಿವೃದ್ಧಿ  ನಮ್ಮ ಗುರಿ ಎಂದರು. ಅಲ್ಲದೇ ರಾಜ್ಯದಲ್ಲಿ ಸದ್ಯ ಇರುವ ಶೇ. 33ರಷ್ಟು ಅನಕ್ಷರತೆಯನ್ನು ನಿರ್ಮೂಲನೆ ಮಾಡುವ ಅಗತ್ಯವಿದೆ ಎಂದರು.

Share Post

Leave a Reply

Your email address will not be published. Required fields are marked *

error: Content is protected !!