ಬಾಗಲಕೋಟ : ಕಂಕಣವಾಡಿ ಗ್ರಾಮದಲ್ಲಿ ತೋಟದ ಗುಡಿಸಲು ಬೆಂಕಿಗಾಹುತಿ

ಬಾಗಲಕೋಟ : ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಕಂಕಣವಾಡಿ ಗ್ರಾಮದಲ್ಲಿ ಇಂದು ತೋಟದಲ್ಲಿ ವಾಸಿಸುವ ಗುಡಿಸಲು ಆಕಸ್ಮಿಕವಾಗಿ ಬೆಂಕಿಗೆ ಸುಟ್ಟು ಭಸ್ಮವಾಗಿದೆ.

ಕಂಕಣವಾಡಿ ಗ್ರಾಮದ ರೈತನಾದ ಸಂತಪ್ಪ,ಸಿತ್ತವ್ವ,ಮಾಂಗ ಇವರ ತೋಟದಲ್ಲಿ ವಾಸಿಸುವ ಗುಡಿಸಲು ಆಕಸ್ಮಿಕವಾಗಿ ಬೆಂಕಿಗೆ ಸುಟ್ಟು ಭಸ್ಮವಾಗಿದೆ. ಗುಡಿಸಲು ನಿರ್ಮಿಸಿಕೊಂಡು ತೋಟದಲ್ಲಿ ವಾಸಿಸುತ್ತಿದ್ದರು. ಆದರೆ ಬೆಂಕಿ ತಗುಲದೇ ಸಂತಪ್ಪ,ಆತನ ಹೆಂಡತಿ ಮತ್ತು ಮೂರು ಜನ ಗಂಡು ಮಕ್ಕಳು ಸ್ಥಳೀಯರಿಂದ ಪಾರಾಗಿದ್ದಾರೆ. ಜೊತೆಗೆ ದನಗಳು,ಜಾನುವಾರುಗಳು ಸಹ ಪ್ರಾಣಾಪಾಯದಿಂದ ಪಾರಾಗಿವೆ.

ಆದರೆ ಗುಡಿಸಲಿನಲ್ಲಿ ಎರಡು ಚೀಲ ಜೋಳ,ಗೃಹೋಪಯೋಗಿ ವಸ್ತುಗಳು,ತಾವು ಉಡುವ ಬಟ್ಟೆಗಳು ಭಾರಿ ಪ್ರಮಾಣದಲ್ಲಿ ಬೆಂಕಿಗೆ ಸುಟ್ಟು ಭಸ್ಮವಾಗಿವೆ. ಸ್ಥಳಕ್ಕೆ ಬಂದ ಜಮಖಂಡಿಯ ಅಗ್ನಿಶಾಮಕ ದಳದ ವಾಹನ ಮತ್ತು ಸಿಬ್ಬಂದಿಗಳು ಬೆಂಕಿಯನ್ನು ಆರಿಸಿದರು.

ಈ ಘಟನೆಯಲ್ಲಿ ಬೆಂಕಿಯನ್ನು ಆರಿಸಲು ಸಹಕರಿಸಿದ ರಾಜು ನದಾಫ,ಬಸವರಾಜ,ಕರಿಬಸನ್ನವರ,ಮಲ್ಲಪ್ಪ,ಪಡೆನ್ನವರ ಸೇರಿದಂತೆ ಹಲವು ರೈತರು ಅಗ್ನಿಶಾಮದಳದ ಜೊತೆಗೆ ಬೆಂಕಿ ಆರಿಸಲು ಸಹಾಯ ಮಾಡಿದರು.

Share Post

Leave a Reply

Your email address will not be published. Required fields are marked *

error: Content is protected !!