ಪೊಲೀಸರಿಗೆ ಶೀಘ್ರದಲ್ಲೇ ಸಿಹಿ ಸುದ್ದಿ: ಗೃಹ ಸಚಿವ ಎಂ.ಬಿ ಪಾಟೀಲ್​

ಬೆಂಗಳೂರು: ಪೊಲೀಸ್ ಇಲಾಖೆ ತುಂಬಾ ಹಿಂದೆ ಇದೆ ಬೇರೆ ಇಲಾಖೆಗೆ ಸರಿಸಮನಾಗಿ ಪೊಲೀಸರನ್ನ ತರಬೇಕಿದೆ ಎಂದು ಗೃಹ ಸಚಿವ ಎಂ.ಬಿ ಪಾಟೀಲ್ ಅವರು ಹೇಳಿದರು.

ವಿಧಾನಸೌಧದಲ್ಲಿ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಮೋಷನ್ ಸಹ ಸರಿಯಾಗಿ ಸಿಗಬೇಕು ಅಂತ ಶಿಫಾರಸು ಮಾಡಲಾಗಿದೆ. ಔರಾದ್ಕರ್ ವರದಿಯಲ್ಲ, ಇದೆಲ್ಲವನ್ನು ಸಿಎಂ ಗಮನಕ್ಕೆ ತರಲಾಗಿದೆ ಎಂದರು.

ಇನ್ನು ಔರಾದ್ಕರ್ ವರದಿಯ ಪ್ರಕಾರ ವೇತನ ಹೆಚ್ಚಳದಿಂದ 600 ಕೋಟಿ ಹೊರೆ ಆಗಲಿದೆ. ಒಂದು ವಾರ ಅಥಾವ 10 ದಿನಗಳಲ್ಲಿ ಈ ಬಗ್ಗೆ ಹಣಕಾಸು ಮತ್ತು ಪೊಲೀಸ್ ಇಲಾಖೆ ಇಬ್ಬರು ಕೂತು ಸಭೆ ನಡೆಸುತ್ತೇವೆ. ಸಕಾರಾತ್ಮಕವಾಗಿ ಸಿಎಂ ಸ್ಪಂದಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಸದ್ಯ ಆ ವರದಿಯ ಬಳಿಕ ಕ್ಯಾಬಿನೆಟ್​ಗೆ ತಂದು ಒಂದು ನಿರ್ಣಯ ತಗೆದುಕೊಳ್ಳುತ್ತೇವೆ. ಒಂದು ವಾರದ ನಂತರ ಪೋಲಿಸರಿಗೆ ಸಿಹಿ ಸುದ್ದಿ ಸಿಗಲಿದೆ. ಸಿಎಂ ಮತ್ತು ಫೈನಾನ್ಸ್ ಡಿಪಾರ್ಟ್ಮೆಂಟ್ ಕೂಡ ಸಕಾರಾತ್ಮಕವಾಗಿದೆ. ಬೇರೆ ಇಲಾಖೆ ನಮ್ಮ ಇಲಾಖೆ ತಾರತಮ್ಯ ಸರಿ ಪಡಿಸಿಲು ಶಿಫಾರಸ್ಸು ಮಾಡಿದರು ಎಂದು ಅವರು ನುಡಿದರು.

ಅಷ್ಟೇ ಅಲ್ಲದೇ ಪ್ರಮೋಷನ್ ಬಗ್ಗೆಯೂ ಶಿಫಾರಸ್ಸು ಮಾಡಲಾಗಿದೆ. ಎರಡು ಪ್ರಮುಖ ಬೇಡಿಕೆ ಬಗ್ಗೆ ಸಿಎಂಗೆ ಸಲ್ಲಿಸಿದ್ದೇವೆ. ಒಂದು ವಾರ ಅಥವಾ 10 ದಿನಗಳಲ್ಲಿ ಈ ಬಗ್ಗೆ ವರ್ಕೌಟ್ ಮಾಡಿ ತರಲು ಸಿಎಂ ಹೇಳಿದ್ದಾರೆ. ಸಕಾರಾತ್ಮಕ ನಿರ್ಧಾರ ಮಾಡಲು ಸಿಎಂ ಮನಸ್ಸು ಮಾಡಿದ್ದಾರೆ ಎಂದು ಅವರು ಸಭೆ ಬಳಿಕೆ ಮಾಧ್ಯಮಕ್ಕೆ ಎಂ.ಬಿ ಪಾಟೀಲ್​ ಪ್ರತಿಕ್ರಿಯೆ ನೀಡಿದರು.

Share Post

Leave a Reply

Your email address will not be published. Required fields are marked *

error: Content is protected !!