ನ್ಯಾಯಬೆಲೆ ಅಂಗಡಿಯಲ್ಲಿ ಸರ್ವರ್ ಇಲ್ಲದೇ ಸಾರ್ವಜನಿಕರು ಕಂಗಾಲು!

ಬಾಗಲಕೋಟ : ಸರ್ಕಾರದ ಆದೇಶ ಮಾಡೋದು ಸುಲಭ, ಆದರೆ ಅದನ್ನು ನಿಭಾಯಿಸುವಲ್ಲಿ ಅಧಿಕಾರಿಗಳು ವಿಫಲವಾಗುತ್ತಿದ್ದಾರೆ, ಇದರಿಂದ ಸಾರ್ವಜನಿಕರ ಗೋಳು ಕೇಳೋರ್ಯಾರು ಎಂಬಂತಾಗಿದೆ.

ಇಂತದ್ದೇ ಒಂದು ಆವಾಂತರ ಬಾಗಲಕೋಟ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಆಗಿದೆ. ರಬಕವಿ-ಬನಹಟ್ಟಿ ತಾಲ್ಲೂಕಿನಾದ್ಯಂತ ಪ್ರತಿಯೊಂದು ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ವರ್ ಇಲ್ಲದೆ ಬಿಪಿಎಲ್ ಕುಟುಂಬಗಳ ಕಾರ್ಡುದಾರರು  ಕಂಗಾಲಾಗಿದ್ದಾರೆ. ನ್ಯಾಯಬೆಲೆ ಅಂಗಡಿಯಲ್ಲಿ ಸರ್ವರ್ ಇಲ್ಲದೆ ಸಾರ್ವಜನಿಕರು ಕಂಗಾಲಾದರೂ ಅಧಿಕಾರಿಗಳು ಮಾತ್ರ  ಗಪ್-ಚುಪ್ ಆಗಿದ್ದಾರೆ. ಇತ್ತೀಚಿಗಷ್ಟೇ ರಾಜ್ಯಸರ್ಕಾರ ರೇಷನ್ ಕಾರ್ಡ್ ಹೊಂದಿರುವ ಪ್ರತಿಯೊಂದು ಕುಟುಂಬದ ಎಲ್ಲರೂ  ಒಟ್ಟಾಗಿ ಹೋಗಿ ನ್ಯಾಯಬೆಲೆ ಅಂಗಡಿಗಳಲ್ಲಿ ಹೆಬ್ಬೆರಳನ್ನು ಒತ್ತಬೇಕು,ಒತ್ತದಿದ್ದರೆ ನಿಮ್ಮ ರೇಷನ್ ಕಡಿತವಾಗುತ್ತದೆ ಎಂದು ಆದೇಶ ಹೊರಬೀಳುತ್ತಿದ್ದಂತೆ ಪ್ರತಿಯೊಬ್ಬ ಸಾರ್ವಜನಿಕರು ನ್ಯಾಯಬೆಲೆ ಅಂಗಡಿಯತ್ತ ಮುಖ ಮಾಡಿ ನಿಂತಿದ್ದಾರೆ.

ದಿನನಿತ್ಯ ಸಾಲಾಗಿ ನಿಂತರೂ ಸರ್ವರ್ ಇಲ್ಲದೆ ಸುಸ್ತು ಸುಸ್ತು. ಸಾರ್ವಜನಿಕರು ನ್ಯಾಯಬೆಲೆ ಅಂಗಡಿಗೆ ಮುಗಿಬೀಳುತ್ತಿದ್ದಾರೆ ಆದರೆ ಸರ್ವರ್ ಇಲ್ಲದೆ ಕೂಲಿ ಕಾರ್ಮಿಕರು,ನೇಕಾರರು,ವಿದ್ಯಾರ್ಥಿಗಳಿಗೆ ಸಾಕಾಗಿಹೋಗಿದೆ. ಅಧಿಕಾರಿಗಳಂತೂ ಗಪ್-ಚುಪ್ ಆಗಿದ್ದಾರೆ, ಇದರ ಬಗ್ಗೆ ಚಿಂತಿಸಿದ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಕೆಂಡಾಮಂಡಲವಾಗಿದ್ದಾರೆ. ಇನ್ನು ಮುಂದೆಯಾದ್ರೂ ಆಹಾರ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಸರಿಯಾಗಿ ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ವರ್ ನೀಡಿ ಸಾರ್ವಜನಿಕರ ಗೋಳನ್ನು ಸರಿಪಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಈ ಬಗ್ಗೆ ಬಾಗಲಕೋಟೆ ಆಹಾರ ಅಧಿಕಾರಿ ಶ್ರೀಶೈಲ ಕಂಕಣವಾಡಿ ಜೊತೆ ನಮ್ಮ ಪ್ರತಿನಿಧಿ ಮಾತನಾಡಿದ್ದಾಗ ಕರ್ನಾಟಕ ರಾಜ್ಯದಲ್ಲಿ ಆಹಾರ ಇಲಾಖೆಯಲ್ಲಿ ಸರ್ವರ್ ತೊಂದರೆಯಾಗಿದ್ದು ಮೂರ್ನಾಲ್ಕು ದಿನಗಳಲ್ಲಿ ಸರಿಪಡಿಸಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದ ಹಾಗೆ ನೋಡಿಕೊಳ್ಳುತ್ತೇವೆ ಎಂದು ಹೇಳಿದರು.

ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ,ನಿಮ್ಮ ರೇಷನ್ ನ್ಯಾಯಬೆಲೆ ಅಂಗಡಿಗಳಲ್ಲಿ ತೆಗೆದುಕೊಳ್ಳಿ,ಸಾಕಷ್ಟು ಸಮಯವಿರುವುದರಿಂದ ನೀವು ಯಾವ ಸಮಯದಲ್ಲಾದರೂ ನಿಮ್ಮ ಕುಟುಂಬಸಮೇತ ಬಂದು ನಿಮ್ಮ ಹೆಬ್ಬೆರಳು ಗುರುತನ್ನು ಓದಿಕೊಳ್ಳಿ ಎಂದು ಬಾಗಲಕೋಟೆ ಆಹಾರ ಅಧಿಕಾರಿ ಶ್ರೀಶೈಲ ಕಂಕಣವಾಡಿ ಹೇಳಿದರು.

Share Post

Leave a Reply

Your email address will not be published. Required fields are marked *

error: Content is protected !!