ಜೂನ್ 21ರಂದು ಬನಹಟ್ಟಿಯಲ್ಲಿ ಯೋಗ ದಿನಾಚರಣೆ

ಬಾಗಲಕೋಟ : ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಾಂಪುರ ನೀಲಕಂಠೇಶ್ವರ ಮಠದಲ್ಲಿ ಜೂನ್ 21 ರಂದು ವಿಶ್ವ ಯೋಗ ದಿನಾಚರಣೆಯ ನಿಮಿತ್ತವಾಗಿ ಬನಹಟ್ಟಿಯ ಎಸ್.ಆರ್.ಎ ಮೈದಾನದಲ್ಲಿ ಯೋಗ ದಿನಾಚರಣೆಯನ್ನು ಆಚರಿಸಲು ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಗಿರೆ.

ಈ ಬಗ್ಗೆ ಇಂದು ನಡೆದ ಪೂರ್ವಭಾವಿ ಸಭೆಯಲ್ಲಿ ರಾಂಪುರ ನೀಲಕಂಠೇಶ್ವರ ಮಠದಲ್ಲಿ ಜೂನ್ 21 ರಂದು ವಿಶ್ವ ಯೋಗ ದಿನಾಚರಣೆಯ ನಿಮಿತ್ತವಾಗಿ ಬನಹಟ್ಟಿಯ ಎಸ್.ಆರ್.ಎ ಮೈದಾನದಲ್ಲಿ 25 ಸಾವಿರ ಜನರೊಂದಿಗೆ ಯೋಗ ದಿನಾಚರಣೆಯನ್ನು ಆಚರಿಸಲು ತೀರ್ಮಾನಿಸಲಾಯಿತು. ಈ ಪೂರ್ವಭಾವಿ ಸಭೆಯಲ್ಲಿ ಹುಬ್ಬಳ್ಳಿ ಮಠದ ಶ್ರೀಶಂಕರಾಚಾರ್ಯರು ಮಹಾಸ್ವಾಮಿಗಳು, ಹುಳ್ಯಾಳದ ಶ್ರೀಹರ್ಷಾನಂದ ಮಹಾಸ್ವಾಮಿಗಳು,ಮೈಗೊರದ ಶ್ರೀಗುರುಪ್ರಸಾದ ಮಹಾಸ್ವಾಮಿಗಳು,ತೇರದಾಳ ಶಾಸಕ ಸಿದ್ದು ಸವದಿ,ನಂದು ಗಾಯಕವಾಡ,ಸಂಜಯ ತೆಗ್ಗಿ.ಡಾ.ಪರಶುರಾಮ ರಾವಳ,ದರಪ್ಪ ಉಳ್ಳಾಗಡ್ಡಿ.ಸುರೇಶ ಚಂಡಕ,ಯಲ್ಲಪ್ಪ ಕಟಗಿ, ಮಲ್ಲಿಕಾರ್ಜುನ ಹೊಸಮನಿ,ಶಂಕರಪ್ಪ ಅಂಬಲಜೇರಿ ಸೇರಿದಂತೆ ರಬಕವಿ ಬನಹಟ್ಟಿ,ರಾಂಪುರ,ಹೊಸೂರ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಹಿರಿಯರು ಕಾರ್ಯಕರ್ತರು ಮತ್ತು ವಿವಿಧ ಸಂಘಟನೆಗಳ ಮುಖಂಡರು ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.

ಯೋಗ ಮಾಡಿದರೆ ರೋಗ ಮಾಯ,ಹಾಗಾಗಿ ಪ್ರತಿಯೊಬ್ಬರೂ ಯೋಗ ಮಾಡಿ ದೇಹ ಸದೃಢ ಮಾಡಿಕೊಳ್ಳಿ ಎಂದು ಈ ಪೂರ್ವಭಾವಿ ಸಭೆಯಲ್ಲಿ ಕರೆ ನೀಡಲಾಯಿತು. ಜೂನ್ 21 ರಂದು 25,000 ಜನರ ಜೊತೆ ಯೋಗ ಮಾಡಲು ಸಂಕಲ್ಪ ತೊಟ್ಟ ರಬಕವಿ-ಬನಹಟ್ಟಿ ಯುವಕರು ಪ್ರತಿಯೊಬ್ಬ ಮನುಷ್ಯ ಪ್ರತಿನಿತ್ಯ ಯೋಗ ಮಾಡಿದರೆ ರೋಗ ಮಾಯವಾಗುತ್ತದೆ. ಹಿಂದಿನ ಕಾಲದಲ್ಲಿ ಮಹಾಪುರುಷ ಸಂತರು ಯೋಗವನ್ನು ಮಾಡಿ ನೂರಾರು ವರ್ಷ ಬದುಕಿದ ಇತಿಹಾಸ ಭಾರತ ದೇಶದಲ್ಲಿದೆ. ಪ್ರತಿನಿತ್ಯ ದಿನಕ್ಕೆ ಒಂದು  ಗಂಟೆ ಕಾಲ ಯೋಗ ಮಾಡಿ ನಿಮ್ಮ ದೇಹವನ್ನು ಸದೃಢ ಮಾಡಿಕೊಳ್ಳಿ. ಜೂನ್ 21 ರಂದು ನಡೆಯುವ ವಿಶ್ವ ಯೋಗ ದಿನಾಚರಣೆ ಇಡೀ ವಿಶ್ವದಲ್ಲೇ ನಡೆಯುತ್ತದೆ. ವಿಶಿಷ್ಟವಾಗಿ ರಬಕವಿ-ಬನಹಟ್ಟಿಯಲ್ಲಿ 25,000 ಜನರನ್ನು ಸೇರಿಸುವ ಸಂಕಲ್ಪವನ್ನು  ರಬಕವಿ-ಬನಹಟ್ಟಿ ತಾಲೂಕಿನ ಯುವಕರು ಮಾಡಿದ್ದಾರೆ. ಯುವತಿಯೊಬ್ಬರು ಜೂನ್ 21 ರಂದು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಿ,  ಯೋಗದ ಮಹತ್ವವನ್ನು ಪಡೆದುಕೊಳ್ಳಿ ಎಂದು ಪೂರ್ವಭಾವಿ ಸಭೆಯಲ್ಲಿ ತಿಳಿಸಲಾಯಿತು.

Share Post

Leave a Reply

Your email address will not be published. Required fields are marked *

error: Content is protected !!