ಜನರ ಮನಸ್ಸು ಗೆಲ್ಲುವಂತೆ ಅಧಿಕಾರಿಗಳು ಕೆಲಸ ಮಾಡಬೇಕು-ಸಂಸದ ಮುನಿಸ್ವಾಮಿ

ಕೋಲಾರ : ನಾನೇನು ಹೆಬ್ಬೆಟ್ಟು ಅಲ್ಲ,ನನಗೆ ಕೆಲಸ ಮಾಡುವುದು ಗೊತ್ತು,ಮಾಡಿಸುವುದೂ ಗೊತ್ತು, ಜನರ ಸಮಸ್ಯೆಗಳಿಗೆ ಸ್ಪಂದಿಸಿ ಅವರ ಮನಸ್ಸುಗಳನ್ನು ಅಧಿಕಾರಿಗಳು ಗೆಲ್ಲಬೇಕು ಎಂದು ಕೋಲಾರ ನೂತನ ಸಂಸದ ಎಸ್.ಮುನಿಸ್ವಾಮಿ ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ.

ಕೋಲಾರ ನಗರದ ಜಿ.ಪಂ.ನಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಅವರು ಪುಲ್ ಕ್ಲಾಸ್ ತೆಗೆದುಕೊಂಡರು. ಇನ್ನು ಸೋಮಾರಿತನದಿಂದ ಕೆಲಸ ಮಾಡುವ ಅಧಿಕಾರಿಗಳು,ಸಿಬ್ಬಂದಿಗಳಿಗೆ ಇಲ್ಲಿ ಸ್ಥಾನವಿಲ್ಲ,ಜ‌ನರ ಸೇವೆ ಮಾಡಲು ಬಂದಿದ್ದರಿಂದ ಸೇವೆ ಮಾಡಿ ಅದು ರಾಜಕೀಯ ಮಾಡಲು ಹೋದ್ರೆ ನಾನು ಅದನ್ನ ಸಹಿಸಲ್ಲ. ಚುನಾಯಿತ ಪ್ರತಿನಿಧಿಗಳು ಬೇರೆ ಬೇರೆ ಪಕ್ಷಗಳಿಂದ ಗೆದ್ದಿರಬಹುದು,ಅಧಿಕಾರ 5 ವರ್ಷ ಇರಬಹುದು‌,ಆದ್ರೆ ನಮ್ಮ ಅಧಿಕಾರಾವಧಿಯಲ್ಲಿ ನಾವು ಜನರಿಗೆ ಏನ್ ಮಾಡಿದ್ದೀವಿ ಅನ್ನೋದು ಇಂಪಾರ್ಟೆಂಟ್ ಎಂದು ತಿಳಿದುಕೊಂಡು ಕೆಲಸ ಮಾಡಿ,ಅದನ್ನ ಬಿಟ್ಟು ಅಧಿಕಾರಿಗಳು ಕಾಟಾಚಾರಕ್ಕೆ ಕಚೇರಿಗಳಿಗೆ ಬಂದು ಹೋಗುವುದನ್ನು ಸಹಿಸುವುದಿಲ್ಲ. ವೈದ್ಯಾಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಉಳಿಯಬೇಕು,ಅಧಿಕಾರಿಗಳಾದವರು ರಾಜಕೀಯ ಮಾಡಬಾರದು,ನೀರು-ವಿದ್ಯುತ್ ಸೇರಿದಂತೆ ಅಭಿವೃದ್ದಿ ಕೆಲಸ ಕಾರ್ಯಗಳ ವಿಚಾರದಲ್ಲಿ ತಾರತಮ್ಯ ಮಾಡಬಾರದು,ಪಕ್ಷ ಬೇಧವಿಲ್ಲದೆ ಜನರಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸಬೇಕು,ಅದರಲ್ಲಿ ಯಾವುದೇ ತಾರತಮ್ಯ ಇರಬಾರದು ಎಂದು ಕಟುಮಾತುಗಳಲ್ಲಿ ಹೇಳಿದರು.

ಕಳೆದ ತಿಂಗಳು ಕೆಜಿಎಫ್‍ನಲ್ಲಿ ವೈದ್ಯರು ಮಾಡಿದ ಲೋಪಕ್ಕೆ ಗರ್ಭಿಣಿ ಹೊಟ್ಟೆಯೊಳಗಿದ್ದ ಮಗು ಸತ್ತು ಹೋಗಿದೆ, ಆದರೆ ಈ ವೀಡಿಯೋ ತೆಗೆದು ವಾಟ್ಸ್‍ಆಪ್ ಮಾಡಿದವನ ಮೇಲೆ ಎಫ್‍ಐಆರ್ ಬುಕ್ ಮಾಡಿಸುತ್ತೀರಿ, ಅಧಿಕಾರಿಗಳು ರೋಗಿಗಳನ್ನು ಸರಿಯಾಗಿ ನೋಡಿಕೊಂಡಿದ್ದರೆ ಈ ಪ್ರಕರಣ ಯಾಕೆ ನಡೆಯುತ್ತಿತ್ತು? ಎಂದು ಸಂಸದರು ಟೀಕಿಸಿದರು. ಇದೇ ವೇಳೆ ಕಾಲೇಜುಗಳಲ್ಲಿ ಬೋಧಕ ವರ್ಗಕ್ಕೆ ಹೆಚ್ಚು ಹೆಚ್ಚು ಸಂಬಳ ಕೊಡುತ್ತಾರೆ,ಆದರೆ ಅವರ ಸಂಬಳಕ್ಕೆ ತಕ್ಕಂತೆ ಫಲಿತಾಂಶವೂ ಬರಬೇಕು ಎಂದು ಸಂಸದ ಮುನಿಸ್ವಾಮಿ ವಾರ್ನ್ ಮಾಡಿದರು.

ಸಭೆಯಲ್ಲಿ ಸಿಇಓ ಜಿ.ಜಗದೀಶ್ ಹಾಜರಿದ್ದು ಸಭೆಯಲ್ಲಿ ಮಾಹಿತಿ ಒದಗಿಸಿದರು. ಜಿ.ಪಂ. ಉಪಾಧ್ಯಕ್ಷೆ ಯಶೋಧ ಕೃಷ್ಣಮೂರ್ತಿ, ಹೆಚ್ಚುವರಿ ಜಿಲ್ಲಾಧಿಕಾರಿ ಪುಷ್ಪಲತಾ,ಜಿ.ಪಂ. ಉಪಕಾರ್ಯದರ್ಶಿ ಲಕ್ಷ್ಮೀನಾರಾಯಣ ಹಾಗು ಜಿ.ಪಂ ಸದಸ್ಯರು ಉಪಸ್ಥಿತರಿದ್ದರು.

Share Post

Leave a Reply

Your email address will not be published. Required fields are marked *

error: Content is protected !!