ಅಧಿಕಾರಿಗಳಿಂದಲೇ ಕೆರೆ ಒತ್ತುವರಿ ಎಂದು ಆರೋಪಿಸಿ ರೈತರಿಂದ ದಿಢೀರ್ ಪ್ರತಿಭಟನೆ

ಕೊಳ್ಳೇಗಾಲ : ಅಭಿವೃದ್ಧಿ ಮಾಡುವ ನೆಪದಲ್ಲಿ ನಗರ ವ್ಯಾಪ್ತಿಯ ಚಿಕ್ಕರಂಗನಾಥನ ಕೆರೆಯನ್ನು ಮುಚ್ಚಲು ನಗರಸಭೆ ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಆರೋಪಿಸಿ ರೈತ ಸಂಘದ ಕಾರ್ಯಕರ್ತರು ಕೊಳ್ಳೇಗಾಲದಲ್ಲಿ ಇಂದು ದಿಢೀರ್ ಪ್ರತಿಭಟನೆ ನಡೆಸಿದರು.

           ಮಹದೇಶ್ವರಬೆಟ್ಟ ರಸ್ತೆಯಲ್ಲಿರುವ ಚಿಕ್ಕರಂಗನಾಥನ ಕೆರೆಗೆ ತೆರಳಿದ ರೈತ ಸಂಘದ ಕಾರ್ಯಕರ್ತರು ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಕಬಿನಿ ಕಛೇರಿಗೆ ತೆರಳಿ ಕಛೇರಿ ಆವರಣದಲ್ಲಿ ಕುಳಿತು ಧರಣಿ ನಡೆಸಿದರು.

ಧರಣಿ ಸ್ಥಳಕ್ಕೆ ಆಗಮಿಸಿದ ಕಬಿನಿ ಕಾರ್ಯಪಾಲಕ ಇಂಜಿನಿಯರ್ ರಘು ಹಾಗೂ ಎಇಇ ಪ್ರಶಾಂತ್ ಅವರನ್ನು ರೈತರು ತರಾಟೆಗೆ ತೆಗೆದುಕೊಂಡರು. ಕೆರೆ ಒತ್ತುವರಿ ಮಾಡುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಬೇಜವಾಬ್ದಾರಿ ವಹಿಸುತ್ತಿದ್ದಾರೆ ಎಂದು ಆರೋಪಿಸಿದರು. ಕೆರೆಕಟ್ಟೆಗಳನ್ನು ಉಳಿಸಿ ಅಭಿವೃದ್ಧಿಪಡಿಸಬೇಕಾದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಕೆರೆಗಳನ್ನು ಮುಚ್ಚದಂತೆ ನೀಡಲಾಗಿದ್ದ 2011 ರ ಸುಪ್ರೀಂಕೋರ್ಟ್ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂದು ರೈತರು ಆರೋಪಿಸಿದರು.

ಬಳಿಕ ಕಬಿನಿ ಅಧಿಕಾರಿಗಳು ರೈತರೊಂದಿಗೆ ಕೆರೆಯ ಒತ್ತುವರಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಬಳಿಕ ಕಬಿನಿ ಇಇ ರಘು ಅವರು ಮಾತನಾಡಿ ಕಾಮಗಾರಿಯನ್ನು ನಿಲ್ಲಿಸಲು ನಗರಸಭೆಗೆ ತಿಳಿಸಿದ್ದೇವೆ ಎಂದರು. ಯೋಜನೆ ರೂಪಿಸಿರುವ ಕುರಿತು ಸಂಪೂರ್ಣ  ಮಾಹಿತಿ ಕೊಡಿ ಎಂದು ತಿಳಿಸಿದ್ದೇವೆ ಎಂದರು.

      ಈ ವೇಳೆ ರೈತ ಮುಖಂಡರಾದ ಕುಂತೂರು ನಂಜುಂಡಸ್ವಾಮಿ,ತೇರಂಬಳ್ಳಿ ಲೋಕೇಶ್,ರಾಮಕೃಷ್ಣ,ಬಸವರಾಜು, ಸಾಮಾಜಿಕ ಕಾರ್ಯಕರ್ತ ದಶರಥ ಹಾಜರಿದ್ದರು.

Share Post

Leave a Reply

Your email address will not be published. Required fields are marked *

error: Content is protected !!