ಅಕ್ರಮ ಮರಳು ಸಾಗಾಟ-ನಿಲ್ಲದ ಮರಳು ಮಾಫಿಯಾ : ಕಣ್ಮುಚ್ಚಿ ಕುಳಿತ ತಾಲ್ಲೂಕಾಡಳಿತ!

ಬೆಳಗಾವಿ : ಜಿಲ್ಲೆಯ ಕಾಗವಾಡ ತಾಲ್ಲೂಕಿನಲ್ಲಿ ಕೃಷ್ಣಾ ನದಿಯ ಒಡಲನ್ನು ಅಗಿದು ಮರಳನ್ನು ಸಾಗಿಸಲಾಗುತ್ತಿದೆ.  

ಕಾಗವಾಡ ತಾಲೂಕಿನ ಬಣಜವಾಡ ಗ್ರಾಮದ ಪಕ್ಕದಲ್ಲಿರುವ ಕೃಷ್ಣಾ ನದಿಯಲ್ಲಿ ಹಾಡಾಹಗಲೇ ಮರಳನ್ನು ಸಾಗಿಸುತ್ತಿದ್ದು ಇತ್ತ ಕಡೆ ಯಾವ ಅಧಿಕಾರಿಯೂ ಗಮನಹರಿಸುತ್ತಿಲ್ಲ. ಒಂದು ಬಾರಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮರಳನ್ನು ಲೋಕೋಪಯೋಗಿ ಇಲಾಖೆಯವರ ವಶಕ್ಕೆ ಪಡೆದು ಟೆಂಡರ್ ಮೂಲಕ ಹರಾಜು ಮಾಡಲಾಗಿತ್ತು. ಆದರೆ ಅದಾದ ನಂತರ ಮತ್ತದೇ ಚಾಳಿಯನ್ನು ಮುಂದುವರೆಸಿ ದ್ವಿಚಕ್ರ,ರಿಕ್ಷಾ,ಎತ್ತಿನಗಾಡಿ,ಟ್ರ್ಯಾಕ್ಟರ್ ಮುಖಾಂತರ ಸಾಗಿಸಿ ಮಾರಾಟ ಮಾಡಲಾಗುತ್ತಿದೆ. ಈ ವಿಷಯ ಅಧಿಕಾರಿಗಳಿಗೆ ತಿಳಿಸಿದರೆ, ನೀವು ವಾಹನ ಹಿಡಿಯಿರಿ ನಾವು ಅದನ್ನ ಸೀಜ್ ಮಾಡುತ್ತೇವೆ ಎಂದು ಬೇಜವಾಬ್ದಾರಿತನದ ಮಾತುಗಳನ್ನಾಡುತ್ತಿದ್ದಾರೆ. ಇದರಲ್ಲಿ ಸ್ಥಳೀಯ ರಾಜಕೀಯ ಹಾಗೂ ಅಧಿಕಾರಿಗಳ ಕೈವಾಡವಿದೆ ಎಂದು ಹೇಳಲಾಗುತ್ತಿದೆ.

ಇನ್ನಾದರೂ ಅಧಿಕಾರಿಗಳಿಂದ ಈ ಅಕ್ರಮ ಮರಳು ಮಾಫಿಯಾಗೆ ಬ್ರೇಕ್ ಬೀಳುತ್ತಾ ಎಂದು ಕಾದುನೋಡಬೇಕಿದೆ.

Share Post

Leave a Reply

Your email address will not be published. Required fields are marked *

error: Content is protected !!