ಸರ್ಕಾರಿ ಆಂಗ್ಲ ಮಾಧ್ಯಮದ ಡಿಮ್ಯಾಂಡ್ಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಅಲ್ಲಾಡಿಹೋಗಿವೆ-ಶಾಸಕ ಎನ್.ಮಹೇಶ್

ಕೊಳ್ಳೇಗಾಲ : ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳು ಪ್ರಾರಂಭವಾಗಿದ್ದು ಮಕ್ಕಳ ಪ್ರವೇಶಾತಿಗಾಗಿ ಪೋಷಕರು ನಡೆಸುತ್ತಿರುವ ಡಿಮ್ಯಾಂಡ್‌ನಿಂದ ಖಾಸಗಿ ಶಿಕ್ಷಣ ಸಂಸ್ಥೆಗಳ ಎದೆ ಅಲ್ಲಾಡಿಹೋಗಿದೆ ಎಂದು ಶಾಸಕ ಎನ್.ಮಹೇಶ್ ಹೇಳಿದ್ದಾರೆ.

      ನಗರ ವ್ಯಾಪ್ತಿಯ ಮುಡಿಗುಂಡದಲ್ಲಿ ನೂತನ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಕನ್ನಡ ನಮ್ಮ ಮಾತೃಭಾಷೆ‌,ಅದು ನಮ್ಮ ರಕ್ತದಲ್ಲೇ ಇದೆ,ಆಂಗ್ಲ ಭಾಷೆ ಅನ್ನ ಕೊಡುವ ಭಾಷೆಯಾಗಿದೆ” ಎಂದು ಅವರು ಅಭಿಪ್ರಾಯಪಟ್ಟರು.

“ಶಿಕ್ಷಣ, ಆರೋಗ್ಯ ಸೇವಾ ವಲಯದಲ್ಲಿ ಬರುವಂಥದ್ದು. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಇವು ಸಂಪೂರ್ಣ ಉಚಿತವಾಗಿವೆ. ಆದರೆ ನಮ್ಮ ರಾಷ್ಟ್ರದಲ್ಲಿ ಶಿಕ್ಷ ಣ ದುಬಾರಿಯಾಗಿದೆ. ಆಂಗ್ಲ ಮಾಧ್ಯಮವೆಂಬ ಕಾರಣಕ್ಕೆ ಬಡವರು ಸಹ ಸಾವಿರಾರು ಹಣ ಕೊಟ್ಟು ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಾರೆ. ಈ ಉದ್ದೇಶದಿಂದ ಖಾಸಗಿಯಂತೆ ಸರ್ಕಾರಿ ಶಾಲೆಯಲ್ಲಿ ಕನ್ನಡದೊಂದಿಗೆ ಅಂಗ್ಲ ಮಾಧ್ಯಮ ಶಾಲೆ ತಂದು ಅನುಕೂಲ ಮಾಡಿದರೆ ಮಾತ್ರ ಸರ್ಕಾರಿ ಶಾಲೆಗಳು ಉಳಿಯುತ್ತವೆ ಎಂದು ಚಿಂತಿಸಿದ್ದೆ‌. ನಮ್ಮ ಉದ್ದೇಶ ಸಫಲವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಪಾಟೀಲ್ ಮಾತನಾಡಿ “ಕನ್ನಡ ಶಾಲೆಗಳಲ್ಲಿ ದಾಖಲಾತಿ ಕೊರತೆ ಆಗುತ್ತಿತ್ತು. ಇದರಿಂದ ಶಿಕ್ಷಕರು ಹೆಚ್ಚುವರಿಯಾಗುತ್ತಿದ್ದರು. ಕಳೆದ ಸಾಲಿನಲ್ಲಿ 45 ಶಿಕ್ಷಕರನ್ನು ಹನೂರಿಗೆ ಕಳುಹಿಸಲಾಗಿತ್ತು. ಸರ್ಕಾರಿ ಆಂಗ್ಲ ಮಾಧ್ಯಮ ಆಗಿರುವುದು ಬಡ ದಲಿತ,ಹಿಂದುಳಿದ,ರೈತಾಪಿ ವರ್ಗಕ್ಕೆ ಬಹಳ ಪ್ರಯೋಜನವಾಗಿದೆ. ಹಿಂದೆ ಕಾನ್ವೆಂಟ್‌ಗಳಿಗೆ ಮಕ್ಕಳನ್ನು ಸೇರಿಸುವುದು ಕಷ್ಟಕರವಾಗಿತ್ತು. ಅಲ್ಲಿನ ಶುಲ್ಕಗಳನ್ನು ಭರಿಸಲು ಸಾಧ್ಯವಾಗುತ್ತಿರಲಿಲ್ಲ. ಇದೀಗ ಕನ್ನಡ ಮಾಧ್ಯಮ ಶಾಲೆಯೊಂದಿಗೆ ಆಂಗ್ಲ ಮಾಧ್ಯಮ ಶಾಲೆ ತೆರೆಯುತ್ತಿರುವುದು ಬಹಳ ಹರ್ಷದಾಯಕ ಎಂದರು.

    ಈ ಸಂದರ್ಭದಲ್ಲಿ ನಗರಸಭೆ ಸದಸ್ಯರುಗಳಾದ ಪುಷ್ಪಲತಾ ಶಾಂತರಾಜು,ರಮ್ಯ,ಮಹೇಶ್,ರಾಮಕೃಷ್ಣ,ಜಯರಾಜು, ನಾಸೀರ್ ಷರೀಫ್,ಮಾಜಿ ಸದಸ್ಯರುಗಳಾದ ಶಾಂತರಾಜು,ರಂಗಸ್ವಾಮಿ(ರವಿ),ಎಸ್.ಡಿ.ಎಂ.ಸಿ ಅಧ್ಯಕ್ಷ ಚಿಕ್ಕಣ್ಣಪ್ಪ,ಸದಸ್ಯರಾದ ನಿಂಗರಾಜಮ್ಮ,ಇಂದ್ರಮ್ಮ,ದೇವಿಕಾ,ಬಿ.ಆರ್.ಸಿ.ಮಂಜುಳಾ,ಸಿ.ಆರ್.ಪಿಗಳಾದ ನಂದಕುಮಾರ್,ಬಸವರಾಜು,ಇಸಿಒ ವರದರಾಜು, ಬಿ.ಆರ್.ಪಿ ಶಾಂತರಾಜು,ಮುಖ್ಯ ಶಿಕ್ಷಕ ರಾಜಶೇಖರ್ ಮುಂತಾದವರಿದ್ದರು.

Share Post

Leave a Reply

Your email address will not be published. Required fields are marked *

error: Content is protected !!