ಬೈಕ್ ಗೆ ಟ್ರಕ್ ಡಿಕ್ಕಿ-ಸ್ಥಳದಲ್ಲೇ ಬೈಕ್ ಸವಾರ ಸಾವು

ವಿಜಯಪುರ : ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ-13ರ ವಡಕಬಳಿ ಬಳಿ ಎದುರಿಗೆ ಬಂದ ಟ್ರಕ್ ಬೈಕ್ ಗೆ ಗುದ್ದಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.

ಈ ಅಪಘಾತದಲ್ಲಿ ಮೃತಪಟ್ಟ ಬೈಕ್ ಸವಾರನನ್ನು ಚಡಚಣ ತಾಲ್ಲೂಕಿನ ಭಂಡರಕವಡೆ ಗ್ರಾಮದ ಪ್ರಕಾಶ ಶ್ರೀಧರ ಬಿರಾದಾರ(50) ಎಂದು ಗುರುತಿಸಲಾಗಿದೆ. ಪ್ರಕಾಶ್ ಸೊಲ್ಲಾಪುರ ಕಡೆಗೆ MH.13 AS 4339 ನಂಬರಿನ ಬೈಕ್ ನಲ್ಲಿ ರಾಷ್ಟ್ರೀಯ ಹೆದ್ದಾರಿ-13 ರಲ್ಲಿ ಚಲಿಸುತ್ತಿರುವಾಗ ಎದುರಿಗೆ ಬಂದ MP 09 HG 1469 ನಂಬರಿನ ಟ್ರಕ್ ಬೈಕ್ ಗೆ ಗುದ್ದಿದೆ. ಪರಿಣಾಮ ಬೈಕ್ ಸವಾರ ಪ್ರಕಾಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

Share Post

Leave a Reply

Your email address will not be published. Required fields are marked *

error: Content is protected !!