ಬೆಳಗಾವಿ : ಕಲ್ಲಿನಿಂದ ಜಜ್ಜಿ ಜೆಸಿಬಿ ಚಾಲಕನ ಭೀಕರ ಹತ್ಯೆ..!

ಬೆಳಗಾವಿ : ಅರಣ್ಯ ಕಾಮಗಾರಿಯಲ್ಲಿ ತೊಡಗಿದ್ದ ಜೆಸಿಬಿ ಚಾಲಕನನ್ನು ಕಲ್ಲಿನಿಂದ ಜಜ್ಜಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಸವದತ್ತಿ ತಾಲೂಕಿನ ಕಾತ್ರಾಳ ಬಳಿ ನಡೆದಿದೆ.

ಶ್ರೀಕಾಂತ್​​​ ಕಳ್ಳಿಮನಿ (22) ಕೊಲೆಯಾದ ದುರ್ದೈವಿ. ಬುಧವಾರ ತಡರಾತ್ರಿ ಅರಣ್ಯ ಇಲಾಖೆಯ ಕಾಮಗಾರಿಯಲ್ಲಿ ತೊಡಗಿದ್ದ ಶ್ರೀಕಾಂತ್​​ನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಮಾಡಿ ಪರಾರಿಯಾಗಿದ್ದಾರೆ. ಕಳೆದ ಒಂದು ವಾರದಿಂದ ಅರಣ್ಯ ಇಲಾಖೆಯ ಕಾಮಗಾರಿಯಲ್ಲಿ ತೊಡಗಿದ್ದ ಶ್ರೀಕಾಂತ್​ ತಡರಾತ್ರಿ ಕೊಲೆಯಾಗಿದ್ದು ಗುರುವಾರ ಮುಂಜಾನೆ ಬೆಳಕಿಗೆ ಬಂದಿದೆ. ಚಿದಂಬರ ಆಡಿನ್​​​ ಮಾಲೀಕತ್ವದ ಜೆಸಿಬಿಯಲ್ಲಿ ಮೃತ ಯುವಕ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಸವದತ್ತಿ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share Post

Leave a Reply

Your email address will not be published. Required fields are marked *

error: Content is protected !!