ದೇವೇಗೌಡರ ಕುಟುಂಬದ ವಿರುದ್ಧ ಸಂಸದ ಜಿ.ಎಸ್.ಬಸವರಾಜು ಮತ್ತೆ ಕಿಡಿ

ತುಮಕೂರು: ದೇವೇಗೌಡರ ಕುಟುಂಬದ ವಿರುದ್ಧ ಸಂಸದ ಜಿ.ಎಸ್.ಬಸವರಾಜು ಮತ್ತೆ ಕಿಡಿಕಾರಿದ್ದಾರೆ. ಹೇಮಾವತಿ ವಿಚಾರದಲ್ಲಿ ಎಚ್ಚರಿಕೆ ಕೊಡುತ್ತೇನೆ. ಲಿಂಕಿಂಗ್ ಕೆನಾಲ ಮಾಡುವ ದುಸ್ಸಾಹಸಕ್ಕೆ ಕೈ ಹಾಕಬೇಡಿ ಎಂದಿದ್ದಾರೆ.

ತುಮಕೂರಿನ ಹೇಮಾವತಿ ನಾಲೆಗೆ ಲಿಂಕಿಂಗ್ ಕೆನಾಲ್ ನಿರ್ಮಿಸಿ ಮಾಗಡಿಗೆ ಕೊಂಡೊಯ್ಯುವ ಯೋಜನೆ ವಿರೋಧಿಸಿದ ಬಸವರಾಜು, ಸಿಎಂಗೆ ಅಲಾರಾಂ ಕೊಡುತ್ತೇನೆ. ನಾವು ಕೊಡುವ ಅಲಾರಾಂ ಅವರಿಗೆ ಎಚ್ಚರಿಕೆ ಆಗಬೇಕು. ಇಂಜಿನಿಯರ್ ಹೇಳುವ ಮಾತನ್ನು ಕೇಳಿ. ಯಾವುದೋ ರಾಜಕಾರಣಿ ಹೇಳ್ತಾನೆ ಅಂತಾ ಹೇಳಿ, ನೀರು ಕೊಂಡೊಯ್ಯುವ ಉಡಾಫೆ ಮಾಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.

ನಾವು ಎಲ್ಲದಕ್ಕೂ ಸಿದ್ದರಿದ್ದೇವೆ. ಎಂದೂ ಕೂಡಾ ತುಮಕೂರಿಗೆ ಹೇಮಾವತಿ ನೀರು ಸಂಪೂರ್ಣವಾಗಿ ಬಿಟ್ಟಿಲ್ಲ. ಸಮುದ್ರಕ್ಕೆ ನೀರು ಬಿಡ್ತಾರೆ ತುಮಕೂರಿಗೆ ಬಿಡಲ್ಲಾ. ತುಮಕೂರಿನವರು ಪಾಕಿಸ್ತಾದವರಾ, ಪಾಪಿಷ್ಟರಾ..? ದೇವೇಗೌಡರ ಕುಟುಂಬ ನೀರಾವರಿ ವಿಚಾರದಲ್ಲಿ ಅನ್ಯಾಯ ಮಾಡುತ್ತಾ ಬಂದಿದೆ. ಮಾನ್ಯ ದೇವೇಗೌಡರು ವಯೋ ವೃದ್ದರು ಅವರಿಗೆ ಸದ್ಬುದ್ದಿ ಬರಲಿ. ಮಕ್ಕಳಿಗೂ ಬುದ್ದಿ ಹೇಳಲಿ.

Share Post

Leave a Reply

error: Content is protected !!