ಜನಸಂಖ್ಯೆಗೆ ತಕ್ಕಂತೆ ಎಸ್ಟಿಗೆ ಮೀಸಲಾತಿ ಕೊಡಿ-ಬೆಂಗಳೂರಿಗೆ ವಾಲ್ಮೀಕಿಪೀಠದ ಶ್ರೀಗಳ ಪಾದಯಾತ್ರೆ

ಚಿತ್ರದುರ್ಗ : ರಾಜ್ಯಸರ್ಕಾರ ಕೂಡಲೇ ಪರಿಶಿಷ್ಟ ಪಂಗಡ ( ST) ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನ ಶೇಕಡಾ 3 ರಿಂದ 7.5 ರಷ್ಟು ಹೆಚ್ಚಿಸುವ ಕುರಿತು ಹಾಗೂ ನಕಲಿ ಜಾತಿ ಪ್ರಮಾಣಪತ್ರವನ್ನು ನೀಡುವ ಅಧಿಕಾರಿಗಳ ಮತ್ತು ಪಡೆದುಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಸಮಾಜದ ವಿವಿಧ ಬೇಡಿಕೆಗಳನ್ನ ಈಡೇರಿಸಲು ಸರ್ಕಾರ ಕ್ಕೆ ಒತ್ತಾಯಿಸಿ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಶ್ರೀಗಳ ಮುಂದಾಳುತ್ವದಲ್ಲಿ ಬೆಂಗಳೂರಿಗೆ ಪಾದಯಾತ್ರೆ ಹೊರಟಿದೆ.

ರಾಜ್ಯದ ನಾಯಕ ಸಮಾಜದ ಬೆಂಬಲದೊಂದಿಗೆ ಹಾಗೂ ವಿವಿಧ ಸಂಘಟನೆಗಳು ಸಂಘ ಸಂಸ್ಥೆಗಳು ಮತ್ತು ಸಮಾಜದ ಮುಖಂಡರು ರಾಜಕೀಯನಾಯಕರು ಹಾಗೂ ಯುವಶಕ್ತಿಯ ಬೃಹತ್ ಬೆಂಬಲದೊಂದಿಗೆ ಪ್ರಸನ್ನಾನಂದಪುರಿ ಶ್ರೀಗಳು ರಾಜಧಾನಿ ಬೆಂಗಳೂರಿಗೆ ಪಾದಯಾತ್ರೆ ಹೊರಟಿದ್ದಾರೆ. ನಿನ್ನೆ ಸಂಜೆ ಸತತ 4ನೇ ದಿನಕ್ಕೆ ಬೃಹತ್ ಪಾದಯಾತ್ರೆ ಕಾಲಿಟ್ಟಿದ್ದು ಚಿತ್ರದುರ್ಗದ ಮಾದಾರ ಚೆನ್ನಯ್ಯ ಶ್ರೀಗಳು ಈ ಹೋರಾಟಕ್ಕೆ ಬೆಂಬಲ ಕೊಡುವುದಾಗಿ ಘೋಷಿಸಿದರು. ನಂತರ ಪ್ರಸನ್ನಾನಂದಪುರಿ ಶ್ರೀಗಳನ್ನ ತಾವು ಸಹ ಪಾದಯಾತ್ರೆ ಮಾಡುವ ಮೂಲಕ ಮುರುಘಾಮಠಕ್ಕೆ ಬೀಳ್ಕೊಟ್ಟರು. ದಿನಾಂಕ 24-06-2019 ರಂದು ಪಾದಯಾತ್ರೆ ಹಿರಿಯೂರು,ಶಿರಾ,ತುಮಕೂರು,ದಾಬಸ್ ಪೇಟೆ,ನೆಲಮಂಗಲ ಮಾರ್ಗವಾಗಿ ಬೆಂಗಳೂರು ತಲುಪಲಿದೆ,ನಂತರ ಫ್ರೀಡಂಪಾರ್ಕ್ ನಲ್ಲಿ ಬೃಹತ್ ಹೋರಾಟ ಸಭೆ ನಡೆಯಲಿದೆ. ಇದರಲ್ಲಿ ಸುಮಾರು 3 ಲಕ್ಷ ಜನರು ಸೇರುವ ಸಾಧ್ಯತೆಗಳಿವೆ.

Share Post

Leave a Reply

Your email address will not be published. Required fields are marked *

error: Content is protected !!