ಸಿದ್ದು ವಿರುದ್ಧ ರೋಷನ್ ಬೇಗ್ ಕಂಪ್ಲೇಂಟ್..!

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ರೋಷನ್ ಬೇಗ್ ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಂನಬಿಗೆ ದೂರು ನೀಡಿದ್ದಾರೆ.

ದೆಹಲಿಯಲ್ಲಿ ಗುಲಾಂನಬಿಯನ್ನು ಭೇಟಿ ಮಾಡಿದ ಮಾಜಿಸಚಿವ ರೋಷನ್‌ಬೇಗ್, ಲೋಕಸಭಾ ಚುನಾವಣೆ ಸೋಲಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಕಾರಣ. ನಾನು, ನಾನೇ ಎನ್ನುವ ಅಹಂ ಅವರಿಗೆ ಇದೆ. ಪಕ್ಷದಲ್ಲಿ ಬೇರೆ ನಾಯಕರಿಗೆ ಅವಕಾಶವಿಲ್ಲ. ಎಲ್ಲವೂ ನಾನು ಹೇಳಿದಂತೆಯೇ ಕೇಳಬೇಕು. ನಾನು ತೆಗೆದುಕೊಂಡ ನಿರ್ಧಾರವೇ ಅಂತಿಮ ಅಂತಾರೆ. ಮೂಲ ಕಾಂಗ್ರೆಸ್ಸಿಗರನ್ನ ಮೂಲೆ ಗುಂಪು ಮಾಡಿದ್ದಾರೆ ಎಂದು ಹೇಳಿದ್ದಾರೆ.

ಅಲ್ಲದೇ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಹೀಗಾಗಿಯೇ ಚುನಾವಣೆಯಲ್ಲಿ ಹಿನ್ನಡೆಯಾಗಿದ್ದು. ಸಮ್ಮಿಶ್ರ ಸರ್ಕಾರವನ್ನು ಸರಿಯಾಗಿ ನಡೆಯಲು ಬಿಡುತ್ತಿಲ್ಲ. ಹೀಗಾಗಿಯೇ ನಮಗೂ ಅಸಮಾಧಾನವಾಗಿದೆ ಎಂದಿದ್ದಾರೆ.

Share Post

Leave a Reply

error: Content is protected !!