ಪೊಲೀಸ್ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಬಾಲ್ಯವಿವಾಹ ಹಾಗೂ ಮಾದಕ ವ್ಯಸನ ತಡೆ ಕಾರ್ಯಗಾರ

ಬೆಂಗಳೂರು : ಶತಶತಮಾನಗಳಿಂದಲೂ ಸಾಮಾಜಿಕ ಪಿಡುಗಾಗಿರುವ ಮಾದಕ ವ್ಯಸನ ಹಾಗೂ ಬಾಲ್ಯ ವಿವಾಹ ಪದ್ದತಿ ಇಂದಿನ  ಯುಗದಲ್ಲಿ ಯುವತಿಯರು ಹಾಗೂ ಮಹಿಳೆಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು ಇದನ್ನು ತಡೆಗಟ್ಟಲು ಬೆಂಗಳೂರಿನ ವೈಟ್ ಫೀಲ್ಡ್ ವಿಭಾಗದ ಪೊಲೀಸರು ಹಾಗೂ ಆರೋಗ್ಯ ಇಲಾಖೆ ಜಂಟಿಯಾಗಿ ಹೊಸ ಕಾರ್ಯಕ್ಕೆ ಮುಂದಾಗಿದ್ದಾರೆ. ಅದು ಹೇಗೆ? ಎಲ್ಲಿ?ಅಂತೀರ ಈ ಸ್ಟೋರಿ ನೋಡಿ.

ಹೀಗೆ ಬೆಂಗಳೂರಿನ ವೈಟ್ ಫೀಲ್ಡ್ ವಿಭಾಗದ ಪೊಲೀಸರು, ಆರೋಗ್ಯ ಇಲಾಖೆ ಅಧಿಕಾರಿಗಳು ಆಶಾ ಕಾರ್ಯಕರ್ತರೊಂದಿಗೆ ಸೇರಿ ಬಾಲ್ಯ ವಿವಾಹ ಹಾಗೂ ಮಾದಕ ವ್ಯಸನ ನಿಯಂತ್ರಣ ಬಗ್ಗೆ ಕಾರ್ಯಗಾರ ನಡೆಸಿದ್ದಾರೆ. ವೈಟ್ ಫೀಲ್ಡ್ ವಿಭಾಗ ಕಾಡುಗೋಡಿ ಸಮೀಪದ ಹೋಟೆಲ್ ಒಂದರಲ್ಲಿ ಆಯೋಜಿಸಿದ್ದ ಈ ಕಾರ್ಯಗಾರದಲ್ಲಿ ಕಾಡುಗೋಡಿ,ವೈಟ್ ಫೀಲ್ಡ್,ಕೆ.ಆರ್.ಪುರ,ಮಹದೇವಪುರ, ವರ್ತೂರು ಪೋಲೀಸ್ ಠಾಣಾ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದು ಬಾಲ್ಯವಿವಾಹದಿಂದ ಆಕೆ ಗರ್ಭವತಿಯಾದಾಗ ಹಾಗೂ ಮಾದಕವ್ಯಸನದಿಂದ ಆಕೆಗೆ ಹುಟ್ಟುವ ಮಗುವಿನ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಪ್ರತಿಯೊಂದು ಮನೆ ಮನೆಗೆ ತಿಳಿಸಿ ಈ ಸಮಸ್ಯೆಯನ್ನು ನಿಯಂತ್ರಿಸುವ ಕೆಲಸಕ್ಕೆ ಪೊಲೀಸರು ಮುಂದಾಗಿದ್ದಾರೆ.

ಇನ್ನು ಪೊಲೀಸ್ ಮಾಹಿತಿ ಪ್ರಕಾರ ಇಂದಿನ ಆಧುನಿಕ ಯುಗದಲ್ಲೂ ಕೆಲವೊಂದು ಸಮುದಾಯದವರು 18 ವರ್ಷಕ್ಕಿಂತ ಮುಂಚಿತವಾಗಿಯೇ ಹೆಣ್ಣುಮಕ್ಕಳಿಗೆ ವಿವಾಹ ಮಾಡುತ್ತಿದ್ದು,ಅಂತಹ ಪೋಷಕರು,ಪುರೋಹಿತರ ಜೊತೆಗೆ ಮದುವೆಗೆ ಬರುವ ಸಾರ್ವಜನಿಕರ ಮೇಲೂ ಪೋಕ್ಸೋ ಕಾಯ್ದೆ ದಾಖಲಿಸುವಂತೆ ಹೊಸ ಕಾಯ್ದೆ ಜಾರಿಗೊಳಿಸಿದ್ದು ಇದು ಎಲ್ಲರಿಗೂ ತಿಳಿಯಪಡಿಸುವ ಉದ್ದೇಶದಿಂದ ಅಯೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆಯರನ್ನು ಒಗ್ಗೂಡಿಸಿಕೊಂಡು ಜನರಿಗೆ ಅರಿವು ಮೂಡಿಸುವ ಕಾರ್ಯಕ್ಕೆ ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಮುಂದಾಗಿದೆ.

ಒಟ್ಟಾರೆ ಸಾಮಾಜಿಕ ಪಿಡುಗಾಗಿರುವ ಮಾದಕ ವ್ಯಸನ ಹಾಗೂ ಬಾಲ್ಯವಿವಾಹ ತಡೆಗೆ ಅದೆಷ್ಟು ಕಾನೂನುಗಳನ್ನು ರೂಪಿಸಿ, ಪಠ್ಯಪುಸ್ತಕ,ಜಾಹಿರಾತು ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಿದರೂ ಎಚ್ಚೆತ್ತುಕೊಳ್ಳದ ಜನ ಇನ್ನಾದರೂ ಅರಿತುಕೊಂಡು ಇದಕ್ಕೆ ಮುಕ್ತಿ ಕಲ್ಪಿಸುತ್ತಾರಾ? ಎಂಬುದನ್ನು ಕಾದು ನೋಡಬೇಕು.

Share Post

Leave a Reply

Your email address will not be published. Required fields are marked *

error: Content is protected !!