ಪೊಲೀಸರ ಸಮಯ ಪ್ರಜ್ಞೆಯಿಂದ ಉಳಿಯಿತು ಮಹಿಳೆ ಪ್ರಾಣ!

ಬೆಂಗಳೂರು : ಪ್ರೀತಿಯ ನಾಟಕವಾಡಿ ಮಹಿಳೆಯನ್ನ ಪುಸಲಾಯಿಸಿದ್ದ ವಿವಾಹಿತನೊಬ್ಬ ಆಕೆಯ ಕೊಲೆ ಯತ್ನ ನಡೆಸಿದ ಘಟನೆ ಬೆಂಗಳೂರಿನ ಕೆ.ಆರ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬಟ್ಟರಹಳ್ಳಿಯಲ್ಲಿ ನಡೆದಿದೆ.

ಕೀಟಮೈನ್ ಮತ್ತು ಫೆನಾರ್ಗನ್ ಇಂಜೆಕ್ಷನ್ ನೀಡಿ ಮಹಿಳೆಯನ್ನ ಕೊಲೆಗೆ ಯತ್ನಿಸಿದ ಆರೋಪಿಗಳನ್ನು ಕೆ.ಆರ್.ಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಶಬರೀಶ್ ಮತ್ತು ನವೀನ್ ಎಂದು ಗುರುತಿಸಲಾಗಿದೆ. ಬಂಧಿತ ಶಬರೀಶ್ ಶೆಟ್ಟಿ ಕನ್ನಡ ಚಿತ್ರನಟ.

ಬಂಧಿತರಿಬ್ಬರೂ ಸೇರಿಕೊಂಡು ಮಹಿಳೆಯ ಕೈಕಾಲು ಕಟ್ಟಿ ಇಂಜೆಕ್ಷನ್ ನೀಡಿದ್ದಾರೆ. ಅರುಣ್ ಎಂಬ ಕನ್ನಡ ಚಲನಚಿತ್ರದಲ್ಲಿ ನಾಯಕ ನಟನಾಗಿದ್ದ ಶಬರೀಶ್ ಶೆಟ್ಟಿ ತಾನು ನಾಯಕನಾಗಿದ್ದೇನೆ ಎಂದು ಹೇಳಿಕೊಂಡು ಸಿನಿಮಾ ಚಾನ್ಸ್ ನೀಡೊ ನೆಪದಲ್ಲಿ ಹಲವು ಯುವತಿಯರಿಗೆ ವಂಚನೆ ಮಾಡುತ್ತಿದ್ದ.

Share Post

Leave a Reply

Your email address will not be published. Required fields are marked *

error: Content is protected !!