ನನ್ನ ಸ್ಥಿತಿ ಯಾವ ಗಂಡಸರಿಗೂ ಬರಬಾರದು..!

ಕೊಪ್ಪಳ: ತನ್ನ ಪತ್ನಿ ಸುಳ್ಳು ಕೇಸ್ ಮತ್ತು ಪಿಎಸ್‌ಐ ಕಿರುಕುಳದಿಂದ ಬೇಸತ್ತ ಪತಿಯೊಬ್ಬ, ಡೆತ್‌ನೋಟ್ ಬರೆದಿಟ್ಟು, ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕೊಪ್ಪಳದ ನಿವಾಸಿ ದೊಡ್ಡಬಸವರಾಜ್ ಅಗಸಿಮುಂದಿನ್ ಮೃತ ವ್ಯಕ್ತಿಯಾಗಿದ್ದು, ಇಂದು ಬೆಳಿಗ್ಗೆ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಪತ್ನಿ ಶಿಲ್ಪಾ ತನ್ನ ಗಂಡ ವರದಕ್ಷಿಣೆ ಕಿರುಕುಳ ಕೊಡುತ್ತಿದ್ದಾನೆಂದು ಸುಳ್ಳು ಆರೋಪ ಮಾಡಿ, ಕೇಸ್ ದಾಖಲಿಸಿದ್ದಳು.

ಅಲ್ಲದೇ ಶಿಲ್ಪಾ, ಪಿಎಸ್‌ಐ ಅಮರೇಶ್ ಹುಬ್ಬಳ್ಳಿ ಎಂಬಾತನೊಂದಿಗೆ ಸೇರಿ ಕಿರುಕುಳ ನೀಡಿದ್ದು, ಈ ಕಾರಣಕ್ಕೆ ಮನನೊಂದ ದೊಡ್ಡಬಸವರಾಜ್, ಪತ್ನಿ ಮತ್ತು ಪೊಲೀಸ್ ವಿರುದ್ಧ ಮೂರು ಪುಟದ ಡೆತ್ ನೋಟ್ ಬರೆದಿಟ್ಟು, ನೇಣಿಗೆ ಶರಣಾಗಿದ್ದಾರೆ. ಮತ್ತೊಮ್ಮೆ ನನ್ನ ಸ್ಥಿತಿ ಯಾವ ಗಂಡಸರಿಗೂ ಬರಬಾರದೆಂದು ಬರೆದಿದ್ದು, ಜಿಲ್ಲಾಸ್ಪತ್ರೆಯಲ್ಲಿ ಮೃತನ ಶವವಿಟ್ಟು, ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share Post

Leave a Reply

error: Content is protected !!