ಕೋಲಾರ : ಸಂಸದರ ನಗರಸಂಚಾರ ಹಿನ್ನೆಲೆ ಎಚ್ಚೆತ್ತ ನಗರಸಭೆ

ಕೋಲಾರ : ಕೋಲಾರ ನಗರ ವ್ಯಾಪ್ತಿ ಹಾಗೂ ಇತರೆ ಬಡಾವಣೆಗಳಲ್ಲಿ ಕಸ ವಿಲೇವಾರಿಯಾಗದೇ ದುರ್ನಾತ ಬರುತ್ತಿದ್ದು ಹಿನ್ನಲೆಯಲ್ಲಿ ಸಾರ್ವಜನಿಕರ ದೂರಿನ ಮೇರೆಗೆ ಇಂದು ನೂತನ ಸಂಸದ ಎಸ್.ಮುನಿಸ್ವಾಮಿ ನಗರಪ್ರದರ್ಶನ ಮಾಡಿದರು.

ಸಾರ್ವಜನಿಕರಿಂದ ನಗರದ ಕಸ ವಿಲೇವಾರಿ ಆಗದೆ ಬಿದ್ದಿದ್ದ ರಾಶಿ ರಾಶಿ ಕಸ‌ ಕಂಡು ನಗರಸಭೆ ಆಯುಕ್ತರಿಗೆ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡರು. ಸಂಸದರ ಬಳಿ ನಗರಸಭೆ ಆಯುಕ್ತ ಸತ್ಯನಾರಾಯಣ ಅಗಮಿಸಿ,ಸಂಸದರ ಸೂಚನೆಯಂತೆ ಎಚ್ಚೆತ್ತ ನಗರಸಭೆ ಬೆಳ್ಳಂಬೆಳಗ್ಗೆ ಕ.ರಾ.ರ.ಸಾ.ನಿ ನಿಲ್ದಾಣದ ಮುಂಬಾಗ 15 ದಿನಗಳಿಂದ ವಿಲೇವಾರಿಯಾಗದೇ ಬಿದ್ದಿದ್ದ ಕಸವನ್ನು ತೆರವುಗೊಳಿಸಲು ಮುಂದಾಗಿದ್ದಾರೆ.

ನಗರಸಭೆ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆ-ಟಿಪ್ಪಣಿಗಳು ವ್ಯಕ್ತವಾಗಿದ್ದು, ಸಂಸದ ಎಸ್.ಮುನಿಸ್ವಾಮಿ ಅವರ ನಡೆಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!