ಇಬ್ಬರು ಪಕ್ಷೇತರರಿಗೆ ಸಚಿವ ಸ್ಥಾನ ಫಿಕ್ಸ್..!

ಬೆಂಗಳೂರು: ಶುಕ್ರವಾರ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ಇಬ್ಬರು ಪಕ್ಷೇತರ ಶಾಸಕರಿಗೆ ಸಚಿವ ಸ್ಥಾನ ಬಹುತೇಕ ಫಿಕ್ಸ್ ಆಗಿದೆ.

ಪಕ್ಷೇತರ ಶಾಸಕರಾಗಿರುವ ನಾಗೇಶ್ ಮತ್ತು ಶಂಕರ್, ಸಿಎಂ ಕುಮಾರಸ್ವಾಮಿ ಸಂಪುಟ ಸೇರಲಿದ್ದಾರೆ. ಶಿವಳ್ಳಿಯವರಿಂದ ತೆರವಾದ ಸ್ಥಾನವನ್ನು ಆರ್.ಶಂಕರ್‌ಗೆ ನೀಡಲಾಗುತ್ತಿದ್ದು, ಜೆಡಿಎಸ್‌ನಿಂದ ಸಿಗುವ ಖಾತೆಯನ್ನು ನಾಗೇಶ್‌ಗೆ ಬಿಟ್ಟುಕೊಡಲಾಗುತ್ತಿದೆ.

ಇನ್ನು ಜೆಡಿಎಸ್‌ನಲ್ಲಿ ಉಳಿದ ಒಂದು ಸ್ಥಾನ ಬಿ.ಎಂ.ಫಾರೂಕ್‌ಗೆ ಫಿಕ್ಸ್ ಮಾಡಿದ್ದು, ಕೊನೆಯ ಕ್ಷಣದಲ್ಲಿ ಅನ್ನದಾನಿಗೆ ಸಿಗುವ ಸಾಧ್ಯತೆ ಹೆಚ್ಚಿದೆ. ಪುಟ್ಟರಂಗ ಶೆಟ್ಟಿ, ವೆಂಕಟರಮಣಪ್ಪ ಕೈ ಬಿಟ್ಟರೆ ಇಬ್ಬರಿಗೆ ಅವಕಾಶ ಸಿಗಲಿದ್ದು, ರಾಮಲಿಂಗಾರೆಡ್ಡಿ, ಬಿ.ಸಿ.ಪಾಟೀಲ್ ಗೆ ಅವಕಾಶ ಸಿಗಬಹುದು. ಆದರೆ ಸದ್ಯಕ್ಕೆ ಇಬ್ಬರು ಸಚಿವರನ್ನ ಕೈ ಬಿಡುವುದು ಡೌಟ್. ಹೀಗಾಗಿ ರಾಮಲಿಂಗಾರೆಡ್ಡಿ, ಬಿ.ಸಿ.ಪಾಟೀಲ್ ಗೆ ಅವಕಾಶ ಕಡಿಮೆ ಎನ್ನಲಾಗಿದೆ.

Share Post

Leave a Reply

error: Content is protected !!