10ನೇ ತರಗತಿ ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ ಉದ್ಯೋಗವಕಾಶ

ಭಾರತೀಯ ಅಂಚೆ ಇಲಾಖೆಯ ಖಾಲಿ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ದಿಲ್ಲಿ, ಹಿಮಾಚಲ ಪ್ರದೇಶ, ಮತ್ತು ಜಾರ್ಖಂಡ್ ರಾಜ್ಯದ ವ್ಯಾಪ್ತಿಯಲ್ಲಿ ಬರುವ ಅಂಚೆ ಇಲಾಖೆಯಲ್ಲಿ 1735 ಹುದ್ದೆಗಳು ಖಾಲಿ ಇದ್ದು, ಜುಲೈ 05 , 2019 ರ ಒಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಈ ಸರ್ಕಾರಿ ಹುದ್ದೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

ಮಾಸ್ಟರ್

ರಾಜ್ಯ ಮತ್ತು ಒಟ್ಟು ಹುದ್ದೆ:
ಜಾರ್ಖಂಡ್- 804 ಹುದ್ದೆಗಳು
ಹಿಮಾಚಲ ಪ್ರದೇಶ- 757 ಹುದ್ದೆಗಳು
ದಿಲ್ಲಿ- 174 ಹುದ್ದೆಗಳು
ಒಟ್ಟು ಹುದ್ದೆಗಳು- 1735

ವಿದ್ಯಾರ್ಹತೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿ ಉತ್ತೀರ್ಣರಾಗಿರಬೇಕು.

ವಯೋಮಿತಿ:
18 ರಿಂದ 40 ವರ್ಷ ವಯಸ್ಸಿನೊಳಗಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಅರ್ಜಿ ಶುಲ್ಕ:
ಈ ಹುದ್ದೆಗಳ ಅಪ್ಲಿಕೇಶನ್ ಶುಲ್ಕ- 100 ರೂ. ಆಗಿರಲಿದೆ.
ಇನ್ನು ಮಹಿಳಾ ಅಭ್ಯರ್ಥಿಗಳಿಗೆ ಮತ್ತು SC/ST/PWD ವರ್ಗದವರಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ವೇತನ:
ಈ ಹುದ್ದೆಗಳ ಕನಿಷ್ಟ ವೇತನ 10 ಸಾವಿರ ರೂ. ನಿಗದಿ ಮಾಡಲಾಗಿದೆ. ಇದಲ್ಲದೆ ಅಭ್ಯರ್ಥಿಗಳ ಕೆಲಸ ಸಮಯದ ಆಧಾರದಲ್ಲಿ ಹೆಚ್ಚಿನ ವೇತನವನ್ನು ನೀಡಲಾಗುತ್ತದೆ. ಕನಿಷ್ಟ 4 ಗಂಟೆವರೆಗೆ ಕೆಲಸ ಮಾಡಿದವರಿಗೆ ನಿರಂತರತೆಯ ಭತ್ಯೆ (TRCA)ಆಧಾರದಲ್ಲಿ ಮೊದಲ ಹಂತದ ವೇತನ ನೀಡಲಾಗುತ್ತದೆ.

ಪ್ರಮುಖ ದಿನಾಂಕ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಜುಲೈ 05 , 2019

ಅರ್ಜಿ ಸಲ್ಲಿಸುವುದು ಹೇಗೆ:
ಆಸಕ್ತ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್​ಸೈಟ್ https://www.indiapost.gov.in ಮೂಲಕ ಅರ್ಜಿ ಸಲ್ಲಿಸಬಹುದು.

Share Post

Leave a Reply

Your email address will not be published. Required fields are marked *

error: Content is protected !!