ರಸ್ತೆ ಅಪಘಾತ ಸಂಭವಿಸಿ ಸ್ಯಾಂಡಲ್‌ವುಡ್ ಖಳನಟ ಸಾವು

ರಾಮನಗರ: ರಸ್ತೆ ಅಪಘಾತ ಸಂಭವಿಸಿ ಸ್ಯಾಂಡಲ್‌ವುಡ್‌ನ ಖಳನಟ ಕುಮಾರ್(24) ಸಾವನ್ನಪ್ಪಿದ್ದಾರೆ. ರಾಮನಗರ ಜಿಲ್ಲೆಯ ಕಗ್ಗಲಿಪುರ ಸಮೀಪದ ಗಾಂಧಿನಗರದಲ್ಲಿ ಈ ದುರಂತ ಸಂಭವಿಸಿದ್ದು, ಖಳನಟ ಸಾವನ್ನಪ್ಪಿದ್ದಾರೆ. ಶಿವರಾಜ್‌ ಕುಮಾರ್ ಅಭಿನಯದ ಭಜರಂಗಿ ಸಿನಿಮಾದಲ್ಲಿ ಕುಮಾರ್ ಖಳನಟನಾಗಿ ನಟಿಸಿದ್ದರು.

ಕನಕಪುರ ತಾಲೂಕಿನ ನಿವಾಸಿಯಾದ ಕುಮಾರ್, ಗಾಂಧಿ ನಗರದ ಸಮೀಪ ಬೈಕ್‌ನಲ್ಲಿ ತೆರೆಳುತ್ತಿದ್ದ ವೇಳೆ, ಎದುರಿನಿಂದ ಬಂದ ಬುಲೆರೋ ಕಾರು ಡಿಕ್ಕಿಯಾಗಿದ್ದು, ಈ ದುರಂತ ಸಂಭವಿಸಿ, ಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ಈ ಬಗ್ಗೆ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share Post

Leave a Reply

Your email address will not be published. Required fields are marked *

error: Content is protected !!