ನಂಬಿದ ದೇವರು ಕೈ ಬಿಟ್ಟಿದ್ದಕ್ಕೆ ವಿಜಯಪುರದ ವ್ಯಕ್ತಿ ಹೀಗಾ ಮಾಡೋದು..?

ವಿಜಯಪುರ: ತಾನು ನಂಬಿದ ದೇವರು ತನ್ನ ಸಮಸ್ಯೆ ಬಗೆಹರಿಸದಿದ್ದಕ್ಕಾಗಿ ದೇವರ ಮೇಲೆ ಕೋಪಗೊಂಡ ವ್ಯಕ್ತಿಯೋರ್ವ ನಂದಿ ಬಸವೇಶ್ವರ ಮೂರ್ತಿಗೆ ಅವಮಾನ ಮಾಡಿದ್ದಾನೆ.

ವಿಜಯಪುರದ ಬಸವನ ಬಾಗೇವಾಡಿ ತಾಲೂಕಿನ ಗೊಳಸಂಗಿ ಗ್ರಾಮದಲ್ಲಿ ಶನಿವಾರ ಈ ಘಟನೆ ನಡೆದಿದ್ದು, ಬಸಪ್ಪ ಚಂದ್ರಾಮಪ್ಪ ದೊಡ್ಡಮನಿ(32) ಎಂಬಾತ ನಂದಿ ಮೂರ್ತಿಗೆ ಕಳೆದ ವಾರದ ಹಿಂದೆ ಚಪ್ಪಲಿ ಹಾರ ಹಾಕಿ ಅವಮಾನ ಮಾಡಿದ್ದ.

ಆರೋಪಿ ಬಸಪ್ಪ, ಮೂರು ನಾಲ್ಕು ಲಕ್ಷ ರೂಪಾಯಿ ಸಾಲ ಮಾಡಿದ್ದ, ಅಲ್ಲದೇ ಹೆಂಡತಿ ಜೊತೆ ಸರಿಯಾಗಿ ಸಂಸಾರ ಮಾಡಲಾಗದ ಕಾರಣ, ಸಮಸ್ಯೆ ಬಗೆಹರಿಸುವಂತೆ ಬಸಪ್ಪ ನಂದಿ ಬಸವೇಶ್ವರ ದೇವರ ಮೊರೆ ಹೋಗಿದ್ದರಂತೆ. ಆದರೆ ತನ್ನ ಸಮಸ್ಯೆ ಬಗೆಹರಿಯದ ಕಾರಣ, ನಂದಿಬಸವೇಶ್ವರ ಮೂರ್ತಿಗೆ ಚಪ್ಪಲಿ ಹಾರ ಹಾಕಿ ಅವಮಾನ ಮಾಡಿದ್ದ.ಈ ಸಂಬಂಧ ಕೂಡಗಿ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಆರೋಪಿಯ ಪತ್ತೆಗಾಗಿ ಪೊಲೀಸರು ವಿಶೇಷ ತಂಡ ರಚಿಸಿದ್ದರು ಕೊನೆಗೂ ಆರೋಪಿ ಬಸಪ್ಪನನ್ನು ಬಂಧಿಸಿದ್ದಾರೆ, ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Share Post

Leave a Reply

error: Content is protected !!