ಐತಿಹಾಸಿಕ ಪಾಪನಾಶನ ದೇವಸ್ಥಾನದ ಪೂಜಾರಿಯ ಬರ್ಬರ ಕೊಲೆ

ಬೀದರ್: ಬೀದರ್‌ನ ಐತಿಹಾಸಿಕ ಪಾಪನಾಶನ ದೇವಸ್ಥಾನದ ಪೂಜಾರಿಯ ಬರ್ಬರ ಕೊಲೆಯಾಗಿದ್ದು, ರಾಡ್ ಮತ್ತು ಮಚ್ಚಿನಿಂದ ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ.

ರಮೇಶ್ ಸ್ವಾಮಿ(35) ಕೊಲೆಯಾದ ವ್ಯಕ್ತಿಯಾಗಿದ್ದು, ಪಾಪನಾಶ ದೇವಾಲಯದ ಕಲ್ಯಾಣಮಂಟಪದಲ್ಲೇ ಈ ದುರಂತ ನಡೆದಿದೆ. ಇನ್ನು ರೇವಣ ಸಿದ್ದಯ್ಯ ಮತ್ತು ರಮೇಶ್ ಮಧ್ಯೆ ದೇವಸ್ಥಾನದ ವ್ಯವಹಾರಗಳ ಅಧಿಪತ್ಯಕ್ಕಾಗಿ ಈ ಗಲಾಟೆ ನಡೆದಿತ್ತು. ರೇವಣ ಸಿದ್ದಯ್ಯ ದೇವಸ್ಥಾನದ ವ್ಯವಹಾರಗಳ ವ್ಯವಸ್ಥೆ ನೋಡಿಕೊಳ್ಳುತ್ತಿದ್ದ. ನಾಲ್ಕು ಕುಟುಂಬಗಳ ನಡುವೆ ದೇವಸ್ಥಾನದ ವ್ಯವಹಾರ ನಡೆಯುತ್ತಿತ್ತು. ಈ ವಿಚಾರಕ್ಕೆ ಗಲಾಟೆ ನಡೆದು, ಕೊಲೆಯಲ್ಲಿ ಅಂತ್ಯವಾಗಿದೆ.

ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಜಿಲ್ಲಾ ಎಸ್ಪಿ ಟಿ.ಶ್ರೀಧರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!