ಮದುವೆಯಾಗುವ ಹುಡುಗಿಗಾಗಿ ಹೆಲಿಕಾಪ್ಟರ್ ಕಳುಹಿಸಿದ ರೈತ..!

ಸೊಲ್ಲಾಪುರ (ಮಹಾರಾಷ್ಟ್ರ): ರೈತರೆಂದರೆ ಮೂಗು ಮುರಿಯುವ ಕಾಲದಲ್ಲಿ ಕೃಷಿಕ ಸಮುದಾಯ ಖುಷಿಪಡುವ ಪ್ರಸಂಗವೊಂದು ಪಂಡರಾಪುರದಲ್ಲಿ ನಡೆದಿದೆ.

ತನ್ನನ್ನು ಮದುವೆಯಾಗುವ ವಧುವನ್ನು ಮಂಟಪಕ್ಕೆ ಕರೆತರಲು ರೈತನಾದ ವರ ಹೆಲಿಕಾಪ್ಟರ್ ಕಳಿಸುವ ಮೂಲಕ ದೇಶದ ಜನರ ಗಮನಸೆಳೆದಿದ್ದಾನೆ. ಈ ರೀತಿಯ ಅಪರೂಪದ ಸಂಗತಿ ದೇಶದಲ್ಲೆ ಮೊದಲು ಎಂದು ವ್ಯಾಖ್ಯಾನಿಸಲಾಗಿದೆ.
ಪವಿತ್ರ ಯಾತ್ರಾ ಸ್ಥಳ ಪಂಡರಾಪುರದ ಉಪ್ಲಾಸಿ ಎಂಬ ಗ್ರಾಮದ ಐಶ್ವರ್ಯ ವಿದ್ಯಾವಂತ ಯುವತಿ. ಕೃಷಿಕ ನೀತಿನ್ ಮತ್ತು ಐಶ್ವರ್ಯ ನಡುವೆ ಮದುವೆ ನಿಶ್ಚಯವಾಗಿತ್ತು. ನೀತಿನ್ ಎಂಬಿಎ ಪದವೀಧರನಾಗಿದ್ದು, ಪಟ್ಟಣದಲ್ಲಿ ಕೆಲಸ ಮಾಡುವ ಬದಲು ಕೃಷಿಯೇ ಶ್ರೇಷ್ಠ ಎಂದು ತನ್ನ ಊರಿಗೆ ಹೋಗಿ ರೈತ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದಾನೆ.
ಕೃಷಿಯಿಂದ ಸಾಕಷ್ಟು ಆದಾಯವನ್ನು ಅವರ ಕುಟುಂಬ ಗಳಿಸಿದೆ. ತನ್ನ ಮದುವೆಯಾಗುವ ಹುಡುಗಿಯನ್ನು ಮಂಟಪಕ್ಕೆ ಕರೆತರಲು ಸಾಮಾನ್ಯವಾಗಿ ಬಸ್, ಕಾರು ಕಳುಹಿಸುವುದನ್ನು ನೋಡಿದ್ದೇವೆ.
ಆದರೆ ನೀತಿನ್ ವಧುವನ್ನು ಬರಮಾಡಿಕೊಳ್ಳಲು ಹೆಲಿಕಾಪ್ಟರ್‍ನ್ನೇ ಕಳುಹಿಸಿದ್ದಾನೆ. ತಮ್ಮ ಊರಿಗೆ ಹೆಲಿಕಾಪ್ಟರ್ ಬರುವುದನ್ನು ನೋಡಲು ಇಡೀ ಊರಿನ ಜನ ಕಾದುಕುಳಿತಿದ್ದರು.

Share Post

Leave a Reply

Your email address will not be published. Required fields are marked *

error: Content is protected !!