ಆಪರೇಷನ್ ಕಮಲ ಫೇಲಾಗಿದ್ದಕ್ಕೆ ಬಿಜೆಪಿಯಿಂದ ಬರ ಅಧ್ಯಯನದ ನಾಟಕ :ಗೃಹ ಸಚಿವ ಎಂ.ಬಿ.ಪಾಟೀಲ್

ವಿಜಯಪುರ: ಬಿಜೆಪಿಯವರ ಬರ ಅಧ್ಯಯನ ಪ್ರವಾಸ ರಾಜಕೀಯ ಗಿಮಿಕ್ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಟೀಕಿಸಿದ್ದಾರೆ. ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ನಡೆಸುತ್ತಿರುವ ಬರ ಅಧ್ಯಯನ ಪ್ರವಾಸ ಒಂದು ನಾಟಕವಾಗಿದೆ.

ಇನ್ನೆರಡು ದಿನಗಳಲ್ಲಿ ಮುಂಗಾರು ಮಳೆ ಆರಂಭವಾಗುತ್ತದೆ. ಈ ಸಂದರ್ಭದಲ್ಲಿ ಅವರ ಬರ ಅಧ್ಯಯನ ನಡೆಸುತ್ತಿದ್ದಾರೆ. ಇಲ್ಲಿಯವರೆಗೆ ಎಲ್ಲಿದ್ದರು ಎಂದು ಪ್ರಶ್ನಿಸಿದ್ದಾರೆ.

ಸಮ್ಮಿಶ್ರ ಸರ್ಕಾರ ರಚನೆಯಾದಾಗಿನಿಂದ ನಿರಂತರವಾಗಿ ಆಪರೇಷನ್ ಕಮಲದಲ್ಲಿ ತೊಡಗಿಸಿಕೊಂಡಿದ್ದ ಬಿಜೆಪಿಯವರಿಗೆ ಈಗ ರಾಜ್ಯದ ಬಗ್ಗೆ, ಬರ ಪರಿಸ್ಥಿತಿಯ ಬಗ್ಗೆ ನೆನಪಾಗಿದೆ ಎಂದು ಛೇಡಿಸಿದರು. ಆಪರೇಷನ್ ಕಮಲ ಫೇಲಾಗಿದ್ದಕ್ಕೆ ಬರ ಅಧ್ಯಯನದ ನಾಟಕವಾಡುತ್ತಿದ್ದಾರೆ. ಜನ ಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ಹೇಳಿದರು.

ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ರೀತಿ ಧಕ್ಕೆ ಇಲ್ಲ. ಸರ್ಕಾರ ಅವಧಿಯನ್ನು ಮುಗಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬರ ನಿರ್ವಹಣೆಯನ್ನು ಸರ್ಕಾರ ಸಮರ್ಪಕವಾಗಿ ಮಾಡುತ್ತಿದೆ. ಬಿಜೆಪಿಯವರು ಅನಗತ್ಯವಾಗಿ ಆರೋಪ ಮಾಡುತ್ತಿದ್ದಾರೆ. ಅಲ್ಲದೇ ರಾಜಕೀಯ ಗಿಮಿಕ್ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

Share Post

Leave a Reply

Your email address will not be published. Required fields are marked *

error: Content is protected !!