ಹಿಂದೆ ಯಾವತ್ತೂ ಮಾಜಿ ಪ್ರಧಾನಿ ದೇವೇಗೌಡರು ಸೋತಿಲ್ಲವೇ..?ಮಾಜಿ ಶಾಸಕ ಕೆ.ಎನ್. ರಾಜಣ್ಣ

ಬೆಂಗಳೂರು:  ದೇವೇಗೌಡರೇನು ಆಕಾಶದಿಂದ ಇಳಿದವರೇ, ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಗಾಳಿಯಿದೆ. ಹೀಗಾಗಿ ಸ್ವಲ್ಪ ಸಮಸ್ಯೆಯಾಗಿದೆ ಹಿಂದೆ ಯಾವತ್ತೂ ಮಾಜಿ ಪ್ರಧಾನಿ ದೇವೇಗೌಡರು ಸೋತಿಲ್ಲವೇ ಎಂದು ಮಾಜಿ ಶಾಸಕ ಕೆ.ಎನ್. ರಾಜಣ್ಣ ಪ್ರಶ್ನೆ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ದೇವೇಗೌಡರ ಸೋಲನ್ನೇ ದೊಡ್ಡದು ಏಕೆ ಮಾಡ್ತೀರ, ಮುನಿಯಪ್ಪ ಸೋತಿದ್ದಾರೆ, ಮಲ್ಲಿಕಾರ್ಜುನ ಖರ್ಗೆಯವರು ಸೋತಿದ್ದಾರೆ ಅವರ ಸೋಲಿನ ಬಗ್ಗೆ ಯಾಕೆ ನೀವು ಮಾತನಾಡಲ್ಲ  ನಾನು ದೇವೇಗೌಡರನ್ನು ಯಾವುದೇ ಭಾಷೆ ಬಳಸಿ ನಿಂದಿಸಿಲ್ಲ ನಾನು ವ್ಯವಸ್ಥೆಯನ್ನು ನಿಂದನೆ ಮಾಡುವವನು ವ್ಯಕ್ತಿಯನ್ನು ನಿಂದನೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಲೋಕಸಭೆ ಫಲಿತಾಂಶ ಪ್ರಕಟವಾದ ನಂತರ ತುಮಕೂರು ಕಾಂಗ್ರೆಸ್ ನಲ್ಲಿ ಸಾಕಷ್ಟು ಗೊಂದಲವಾಗಿದೆ. ಇದರಿಂದ ಇಂದು ನಾನು ಮಾತನಾಡಬೇಕು ಎಂದುಕೊಂಡಿದ್ದೇ.  ನಾನು ಪರಮೇಶ್ವರ್ 67 ರಿಂದಲೂ ಸ್ನೇಹಿತರು. ಜಿರೋ ಟ್ರಾಫಿಕ್ ನಿಂದ ಸಾರ್ವಜನಿಕರಿಗೆ ಸಮಸ್ಯೆಯಿತ್ತು, ನಾನು ಬಳಸಬೇಕೆಂದು ಆ ಭಾಷೆ ಬಳಸಿಲ್ಲ, ಹಾಗೇನಾದರೂ ಬಳಸಿದ್ದರೆ ಅದಕ್ಕೆ ನನ್ನ ವಿಷಾದವಿದೆ. ನಾನು ಪರಮೇಶ್ವರ್ ಜಗಳ ಮಾಡೋದು ಒಂದಾಗೋದು ಹೊಸದೇನಲ್ಲ, ಮೊದಲಿನಿಂದಲೂ ನಾನು ಅವರು ಹಾಗೇ ಇದ್ದೇವೆ. ಆದರೆ ಕೆಟ್ಟ ದೃಷ್ಟಿಯಿಂದ ನಾನು ಅವರನ್ನು ನೋಡಿದವನಲ್ಲ ಎಂದು ಕೆ.ಎನ್.ರಾಜಣ್ಣ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

Share Post

Leave a Reply

error: Content is protected !!