ಮಾನ ಮರ್ಯಾದೆ ಇದ್ದರೆ ಹಾಗೆ ಮಾತಾಡ್ತಿರ್ಲಿಲ್ಲ – ಸಂಸದ ಜಿ.ಎಸ್ ಬಸವರಾಜು

ತುಮಕೂರು :  ಅವನ್ಯಾರೋ ನಮ್ಮ ಜಿಲ್ಲೆಯ ಕ್ಷೇತ್ರದ ಶಾಸಕನಾಗಿ ನೀರು ಹೇಗೆ ತರ್ತಾರೋ ನೋಡೋಣ ಅಂತಾನಲ್ಲ ಅವನಿಗೆ ಮಾನ ಮರ್ಯಾದೆ  ಇದ್ದರೆ ಹಾಗೆ ಮಾತಾಡ್ತಿರ್ಲಿಲ್ಲ ಎಂದು ಸಂಸದ ಜಿ.ಎಸ್ ಬಸವರಾಜು ಶಾಸಕರು ಮತ್ತು ಸಚಿವರ ವಿರುದ್ಧ ವಾಗ್ದಾಳಿ ನಡೆಸಿದರು.

ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಸಕನಾಗಿ ಒಂದು ಕೆರೆಯನ್ನೂ ತುಂಬಿಸೋಕೆ ಯೋಗ್ಯತೆ ಇಲ್ಲ. 17ಟಿಎಂಸಿ ಬದಲಿಗೆ 45 ಟಿಎಂಸಿ ನೀರನ್ನು ಉಪಯೋಗಿಸಿಕೊಂಡು ಎಲ್ಲರಿಗೂ ನಾಮ ಹಾಕ್ಕೊಂಡು, ನಾಲೆ ಒಡೆಯುವಂಥವರಿಗೆ ನಾವು ಬಲಿಯಾಗಲ್ಲ , ಅವರಂತೆ ಸ್ವಾರ್ಥಕ್ಕಾಗಿ ಮೂರ್ಖತನದ ಪರಮಾವಧಿ ಮಾಡಲ್ಲ ಎಂದು ಆಕ್ರೋಶ ಹೊರಹಾಕಿದರು.

“ಪ್ರಧಾನಿ ಮೋದಿಯಂತೆ ನಾನೂ ಕಾವಲುಗಾರ” ನೀರುಗಂಟಿ ಕೆಲಸ ಮಾಡೋದೂ ದೇಶ ಸೇವೆ,  ಪ್ರಧಾನಿ ಮೋದಿಯಂತೆ ನಾನೂ ಕಾವಲುಗಾರನಾಗಿ ಕೆಲಸ ಮಾಡುತ್ತೆನೆ.  ಸಚಿವ ರೇವಣ್ಣ ಗೋರೂರು ಡ್ಯಾಂ ಕೀ ಕೊಟ್ಟರೆ ಕಾವಲುಗಾರನಂತೆ ಕೆಲಸ ಮಾಡುತ್ತೇನೆ.  ಜಿಲ್ಲೆಯ ಜನತೆಗೆ ಒಳ್ಳೆಯದಾಗಲಿದೆ ಅಂದರೆ ನೀರುಗಂಟಿ ಕೆಲಸ ಮಾಡಲೂ ಸಿದ್ದ ಎಂದು ಸಚಿವ ರೇವಣ್ಣ ಹಾಗೂ ಎಸ್. ಆರ್. ಶ್ರೀನಿವಾಸ್ ಗೆ  ಸಂಸದ ಬಸವರಾಜು ಟಾಂಗ್ ಕೊಟ್ಟರು.

Share Post

Leave a Reply

Your email address will not be published. Required fields are marked *

error: Content is protected !!