ನೂತನ ಕೊಪ್ಪಳ ಸಂಸದ ಸಂಗಣ್ಣ ಕರಡಿಗೆ ಸನ್ಮಾನ

ಕೊಪ್ಪಳ : ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಸತತ 2ನೇ ಬಾರಿಗೆ ಆಯ್ಕೆಯಾದ ಸಂಗಣ್ಣ ಕರಡಿಯವರಿಗೆ ಸನ್ಮಾನ ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭ ನಡೆಯಿತು.

ಸಂಸದ ಸಂಗಣ್ಣ ಕರಡಿ ಹಾಗೂ ಮಾಜಿ ಶಾಸಕರಾದ ದೊಡ್ದನಗೌಡ,ಎಚ್.ಪಾಟೀಲ,ಕೆ.ಶರಣಪ್ಪ (ವಕೀಲರು),ಪುರಸಭೆ ಅಧ್ಯಕ್ಷರು,ಜಿಲ್ಲಾ ಪಂಚಾಯಿತಿ ಸದಸ್ಯರು ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಸಭೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಶಾಸಕರಾದ ಕೆ.ಶರಣಪ್ಪ(ವಕೀಲ) “ಮಾಜಿ ಸಚಿವರಾದ ಬಸವರಾಜ ರಾಯರೆಡ್ಡಿಯವರು ಬರೀ ರೀಲು ಮಾತ್ರ ಬಿಡುತ್ತಾರೆ, ಆದರೆ ಅದಕ್ಕೆ ಸಂಗಣ್ಣ ಕರಡಿನವರು ಹಳಿ ಜೋಡಿಸುತ್ತಾರೆ, ರೈಲು ಬಿಡುತ್ತಾರೆ” ಎಂದು ಕಿಡಿಕಾರಿದರು. ನಮ್ಮ ಕುಷ್ಟಗಿ ತಾಲ್ಲೂಕಿನಲ್ಲಿ ಕೃಷ್ಣ ಬಿ ಸ್ಕೀಂ ಯೋಜನೆ ಕಾರ್ಯರೂಪಕ್ಕೆ ತರಬೇಕು, ಹಾಗೆಯೇ     ನೀರಾವರಿ ತರುವುದು ಆದಷ್ಟು ಬೇಗ ಮಾಡಿ,ಜೊತೆಗೆ ನಮ್ಮ ಕುಷ್ಟಗಿ ತಾಲ್ಲೂಕಿಗೆ ಹೆಚ್ಚಿನ ಅನುದಾನವನ್ನು ನೀಡಿ ಎಂದು ಮನವಿ ಮಾಡಿಕೊಂಡರು.

Share Post

Leave a Reply

Your email address will not be published. Required fields are marked *

error: Content is protected !!