ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯ ಭವಿಷ್ಯ ಕಾಣ್ತಿಲ್ಲ- ಚಲುವರಾಯಸ್ವಾಮಿ

ಮಂಡ್ಯ: ರಾಜ್ಯದಲ್ಲಿ ಜೆಡಿಎಸ್ ದೋಸ್ತಿಯಿಂದ ಕಾಂಗ್ರೆಸ್ ಪಕ್ಷದ ಅಸ್ತಿತ್ವಕ್ಕೆ ಧಕ್ಕೆಯಾಗುತ್ತಿರುವ ಹಿನ್ನೆಲೆ, ಕಾಂಗ್ರೆಸ್ ಜೆಡಿಎಸ್ ಮೈತ್ರಿ ವಿರುದ್ದ ಮಂಡ್ಯದ ಕೈ ನಾಯಕ ಚಲುವರಾಯಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಡ್ಯದ ನಾಗಮಂಗಲದಲ್ಲಿ ಮಾತನಾಡಿದ ಚಲುವರಾಯಸ್ವಾಮಿ, ಮೈತ್ರಿ ವಿಚಾರದಲ್ಲಿ ರಾಷ್ಟ್ರದ ನಾಯಕರು ತೆಗೆದುಕೊಂಡಿರುವ ತೀರ್ಮಾನಕ್ಕೆ ನಾನು ಬದ್ಧ. ಆದ್ರೆ ಇದೇ ರೀತಿ ಮುಂದುವರೆದ್ರೆ ಕಾಂಗ್ರೆಸ್ ಪಕ್ಷ ಬಹಳ ಕಷ್ಟದ ಪರಿಸ್ಥಿತಿ ಎದುರಿಸಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.

ನಮ್ಮ ನಾಯಕರುಗಳು ಇದನ್ನ ಸರಿಪಡಿಸಬೇಕು ಇಲ್ಲ, ಒಂದು ಪೂರ್ಣ ಪ್ರಮಾಣದ ತೀರ್ಮಾನ ತೆಗೋಬೇಕು. ಆಗ್ಲಿಲ್ಲ ಅಂದ್ರೆ ಮುಂದೆ ಈ ಪಕ್ಷವನ್ನು ಈ ಸ್ಥಿತಿಗೆ ಬರದೇ ಇರೋತರ ನೋಡಿಕೊಳ್ಳೋಕೆ ಪಕ್ಷದ ಎಲ್ಲಾ ಮುಖಂಡರು ಜವಬ್ದಾರಿ ತೆಗೆದುಕೊಳ್ಳಬೇಕಾಗುತ್ತದೆ. ನಾನು ಇವತ್ತು ಪಕ್ಷದ ತೀರ್ಮಾನವನ್ನು ಪ್ರಶ್ನೆ ಮಾಡೋಕೆ ಹೋಗಲ್ಲ. ಆದ್ರೆ ಈಗಿನ ನಡವಳಿಕೆ ನೋಡ್ತಿದ್ರೆ ಪಕ್ಷಕ್ಕೆ ಒಳ್ಳೆಯ ಭವಿಷ್ಯ ಕಾಣ್ತಿಲ್ಲ ಎಂದು ಹೇಳಿದ್ದಾರೆ.

ಈಗ ನಮ್ಮಲ್ಲಿ ಕೆಲವರಿಗೆ ಮನವರಿಕೆಯಾಗಿದೆ, ಮೈತ್ರಿ ಚುನಾವಣೆಯಿಂದ ಈ ಮಟ್ಟಿಗೆ ಪರಿಸ್ಥಿತಿ ಎದುರಾಗಿದೆ ಅಂತಾ. ಇದನ್ನ ನಾನು ಕಾದು ನೋಡ್ತಿನಿ. ಇದು ಹೆಚ್ಚು ಉಳಿಯಲ್ಲ. ಈಗಾಗಲೇ ಜನ ಒಂದ್ಸಾರಿ ತೋರಿಸಿದ್ದಾರೆ. ಇನ್ನು ಮತ್ತೆ ಅದನ್ನೇ ಮಾಡಿದ್ರೆ ಜನ ತೀರ್ಮಾನ ತಗೋತಾರೆ ಬಿಡಿ, ನನ್ನೊಬ್ಬನ ಕೈಲಿ ಇಲ್ಲ ಎಂದಿದ್ದಾರೆ.

ಸರ್ಕಾರ ಇನ್ನೂನು ಬುದ್ದಿ ಕಲಿತಿಲ್ಲ. 23ರ ಫಲಿತಾಂಶ ಬಂದ್ಮೇಲೂ ಬುದ್ದಿ ಕಲೀದೆ ಇದ್ರೆ ಜೊತೆಲಿದ್ದಂತಹ ಕಾಂಗ್ರೆಸ್ ಪಕ್ಷ ನೋವು ಅನುಭವಿಸಬೇಕಾಗುತ್ತೆ. ಜೆಡಿಎಸ್‌ನವರರಿಗೂ ಜನ ಬುದ್ದಿ ಕಲಿಸ್ತಾರೆ ಎಂದು ಚಲುವರಾಯಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!