ಸತೀಶ – ಲಕ್ಷ್ಮೀ ಕಾದಾಟ: ಜಿಲ್ಲಾಡಳಿತಕ್ಕೆ ಎರಡು ದಿನಗಳ ಗಡುವು ನೀಡಿದ ಲಕ್ಷ್ಮೀ ಹೆಬ್ಬಾಳ್ಕರ್..!

ಬೆಳಗಾವಿ: ಇತ್ತೀಚೆಗಷ್ಟೇ ಪಿ.ಎಲ್.ಡಿ ಬ್ಯಾಂಕ್ ಚುನಾವಣೆಯಲ್ಲಿ ಸಾರ್ವಜನಿಕವಾಗಿ ಕಾದಾಟಕ್ಕಿಳಿದು ಸರಕಾರ ಅಲುಗಾಡಿಸುವ ಮಟ್ಟಕ್ಕಿಳಿದಿದ್ದ ಸಚಿವ ಸತೀಶ ಜಾರಕಿಹೊಳಿ ಹಾಗೂ ಶಾಸಕಿ  ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಮತ್ತೊಂದು ಕಾದಾಟ ನಡೆಯುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ತನ್ನ ಕ್ಷೇತ್ರದ   ಹಲಗಾ ಸಮೀಪ ಎಸ್,ಟಿ,ಪಿ ಪ್ಲಾಂಟ್ ನಿರ್ಮಾಣಕ್ಕೆ ರೈತರ ಬೆಲೆ ಬಾಳುವ ಜಮೀನಿಗೆ  ಸೂಕ್ತ ಬೆಲೆ ನೀಡಿಲ್ಲ ಎಂದು ಆರೋಪಿಸಿ ಲಕ್ಷ್ಮೀ ಜಿಲ್ಲಾಡಳಿತದ ವಿರುದ್ಧ ವಿರೋಧಿಸಿ ಪ್ರತಿಭಟಿಸುತ್ತಿದ್ದರೆ ಇತ್ತ ಸಚಿವ ಸತೀಶ ಜಾರಕೀಹೊಳಿ ಜಿಲ್ಲಾಡಳಿತದ ಕ್ರಮವನ್ನು ಸಮರ್ಥಿಸಿದ್ದಾರೆ. ಈ ನಡುವೆ  ಇಂದು ಬೆಳಗಾವಿಯ ತನ್ನ ಸ್ವಗೃಹದಲ್ಲಿ  ಬೆಳಂಬೆಳಿಗ್ಗೆ  ತುರ್ತು ಪತ್ರಿಕಾಗೋಷ್ಠಿ ನಡೆಸಿದ ಲಕ್ಷ್ಮೀ ಹೆಬ್ಬಾಳ್ಕರ್ ರೈತರಿಗೆ ನ್ಯಾಯ ಕೊಡಲು ಎರಡು ದಿನ ಕಾಯುತ್ತೇವೆ ತದನಂತರ STP ಕೆಲಸ ನಿಲ್ಲಿಸುತ್ತೇವೆ ಎಂದು  ಗುಡುಗಿದ್ದಾರೆ.ಹಲಗಾ ರೈತರ ಬೆಲೆಬಾಳುವ ಕೃಷಿ ಜಮೀನಿಗೆ ಪರ್ಯಾಯವಾಗಿ ಸೂಕ್ತ ಬೆಲೆ ಕೊಡಬೇಕಲ್ಲವೇ ಎಂದು ಪ್ರಶ್ನಿಸಿರುವ ಅವರು ತನ್ನ ಹೋರಾಟ ರಾಜ್ಯ ಸರಕಾರದ ವಿರುದ್ಧ ಅಲ್ಲ ಜಿಲ್ಲಾಡಳಿತದ ವಿರುದ್ದ ಎಂದು ಸ್ಪಷ್ಠಪಡಿಸಿದ್ದಾರೆ.ಒಟ್ಟು 150 ಜನ ರೈತರು ಭೂಮಿ ಕಳೆದುಕೊಂಡ ಸಂಕಷ್ಟದಲ್ಲಿದ್ದಾರೆ. ಕಳೆದ 2009ನೇ ಸಾಲಿನ ನಿರ್ಧಾರವೆಂದು ಹೇಳಿ ಜಿಲ್ಲಾಡಳಿತ ರೈತರ ಧ್ವನಿ ಕೇಳಿಸಿಕೊಳ್ಳುತ್ತಿಲ್ಲ ಎಂದರು.ಇನ್ನೆರಡು ದಿನ ಜಿಲ್ಲಾಡಳಿತದ ನಿರ್ಧಾರ ಕಾಯ್ದು ನಂತರ STP ಕೆಲಸ ನಿಲ್ಲಿಸಲು ನಾನೇ ಹೊಲ ದಲ್ಲಿ ತಡೆಹಿಡಿಯುವೆ ಎಂದು ಎಚ್ಚರಿಸಿದರು.

Share Post

Leave a Reply

error: Content is protected !!