ಸಂಸತ್ ಭವನದ ಎದುರು ಫೋಟೋ ತೆಗೆಸಿಕೊಂಡ ಸುಮಲತಾ…!

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಲ್ಲಿ ಪಕ್ಷೇತರವಾಗಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಶ್ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪುತ್ರ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ್ ವಿರುದ್ಧ ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಜಯ ಸಾಧಿಸಿದ್ದರು. ಸಂಸದರಾಗಿ ಇದೇ ಮೊದಲ ಬಾರಿಗೆ ಲೋಕಸಭೆಗೆ ತೆರಳಿರುವ ಅವರು ಸಂಸತ್ ಭವನದ ಎದುರು ಫೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ.

ಫೇಸ್ ಬುಕ್ ನಲ್ಲಿ ಸಂಸತ್ ಭವನದ ಎದುರು ತೆಗೆಸಿಕೊಂಡಿರುವ ಪೋಟೋ ಶೇರ್ ಮಾಡಿರುವ ಸುಮಲತಾ ಅಂಬರೀಶ್, ದೀರ್ಘ ಪ್ರಯಾಣ .. ಪ್ರಜಾಪ್ರಭುತ್ವದ ಪವಿತ್ರ ದೇವಸ್ಥಾನಕ್ಕೆ… ಜೈ ಹಿಂದ್… ಜೈ ಕರ್ನಾಟಕ… ಎಂದು ಬರೆದುಕೊಂಡಿದ್ದಾರೆ. ಇದರೊಂದಿಗೆ ಗೌರವ ಮತ್ತು ಹೆಮ್ಮೆಯಾಗುತ್ತಿದೆ ಎಂದೂ ಕೂಡ ಬರೆದುಕೊಂಡಿದ್ದಾರೆ.

Share Post

Leave a Reply

error: Content is protected !!