ರಸ್ತೆಯಲ್ಲಿ ಗಜರಾಜನ ಕಿರಿಕ್​, ಅರ್ಧ ಕಿ.ಮೀ ಹಿಮ್ಮುಖವಾಗಿ ಚಲಿಸಿದ ಬಸ್..!

ಮೈಸೂರು: ಬಸ್ ಮೇಲೆ ಕಾಡಾನೆಯೊಂದು ದಾಳಿ ಮಾಡಲು ಯತ್ನಿಸಿದ ಘಟನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದಿದೆ. ಕೇರಳ ನೋಂದಣಿಯ ಬಸ್ ಬಳ್ಳೆ ವಲಯ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಮಾರ್ಗದ ಮೂಲಕ ಮಾನಂದವಾಡಿ ಕಡೆಗೆ ತೆರಳುತ್ತಿತ್ತು. ಈ ವೇಳೆ ಗಂಡು ಆನೆಯೊಂದು ಬಸ್‌ ಅಟ್ಟಿಸಿಕೊಂಡು ಬಂದಿದೆ. ಈ ವೇಳೆ ಬಸ್ ಚಾಲಕ ಸುಮಾರು ಅರ್ಧ ಕಿ.ಮೀ.ವರೆಗೂ ಬಸ್​ನ ಹಿಮ್ಮುಖವಾಗಿ ಚಾಲನೆ ಮಾಡಿದ್ದಾರೆ. ಆನೆ ಕಂಡು ಬಸ್‌ನಲ್ಲಿದ್ದ ಪ್ರಯಾಣಿಕರು ಗಾಬರಿಗೊಂಡು ಕೂಗಾಟ ನಡೆಸಿದ್ದಾರೆ. ಪ್ರಯಾಣಿಕರ ಕಿರುಚಾಟದಿಂದ ಹೆದರಿದ ಗಜರಾಜ ಮತ್ತೆ ಕಾಡಿನ ದಾರಿ ಹಿಡಿದಿದೆ.

Share Post

Leave a Reply

error: Content is protected !!