ಮುಖ್ಯಮಂತ್ರಿ ಆದವರಿಗೆ ತಾಳ್ಮೆ ಇದ್ರೆ ಒಳ್ಳೆಯದು : ಪೇಜಾವರ ಶ್ರೀ

ಬಳ್ಳಾರಿ : ಮುಖ್ಯಮಂತ್ರಿ ಆದವರು ಇಷ್ಟೊಂದು ಮಾತನಾಡಬಾರದು, ತಾಳ್ಮೆ ಇದ್ದರೆ ಒಳ್ಳೆಯದು ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ.ಬಳ್ಳಾರಿಯಲ್ಲಿ ಉಡುಪಿಯ ಪೇಜಾವರ ಶ್ರೀಗಳು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಜಾತ್ಯತೀತ‌ ಸಿದ್ಧಾಂತ, ಎಡಪಂಥೀಯ- ಬಲಪಂಥೀಯ ವಿಭಜನೆಗಳನ್ನು ಬಿಟ್ಟು ಮೂರೂ ಪಕ್ಷಗಳು ಒಗ್ಗಟ್ಟಾದರೆ ಮಾತ್ರ ಗೊಂದಲಗಳು ಬಗೆಬಹರಿಯುತ್ತವೆ. ಜನರಿಗೆ ಉತ್ತಮ ಆಡಳಿತವೂ ದೊರಕುತ್ತದೆ ಎಂದರು. ಬಿಜೆಪಿಯೂ ಸಂವಿಧಾನವನ್ನು ಒಪ್ಪಿಕೊಂಡಿದೆ. ಅದೂ ಜಾತ್ಯತೀತ ಪಕ್ಷವೇ. ಹೀಗಾಗಿ ಮೂರು ಪಕ್ಷಗಳು ಸೇರಿ ರಾಜ್ಯದಲ್ಲಿ ಅಧಿಕಾರ ನಡೆಸಬೇಕು ಎಂದು ಪ್ರತಿಪಾದಿಸಿದರು.

Share Post

Leave a Reply

error: Content is protected !!