ನೀಟ್ ಫಲಿತಾಂಶ ಪ್ರಕಟ: ರಾಜ್ಯಕ್ಕೆ ಫಣೀಂದ್ರ ಫಸ್ಟ್

ಬೆಂಗಳೂರು:ರಾಷ್ಟ್ರೀಯ ಅರ್ಹತಾ ಪ್ರವೇಶ ಫಲಿತಾಂಶ (ನೀಟ್) ಪ್ರಕಟವಾಗಿದ್ದು, ರಾಜಸ್ಥಾನ ಮೂಲದ ನಳಿನ್ ಖಂಡೆವಾಲಾ ದೇಶಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ದೆಹಲಿ ಮೂಲದ ಭವೀಕ್ ಬನ್ಸಾಲ್ ದ್ವಿತೀಯ ಸ್ಥಾನ ಪಡೆದಿದ್ದು, ಉತ್ತರ ಪ್ರದೇಶ ಮೂಲದ ಅಕ್ಷತ್‍ಕೌಶಿಕ್ ತೃತೀಯ ಸ್ಥಾನ ಗಳಿಸಿದ್ದಾರೆ.ಕರ್ನಾಟಕದ ಡಿ.ಕೆ.ಫಣೀಂದ್ರ 36ನೇ ರ್ಯಾಂಕ್ ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಈ ಬಾರಿ ನೀಟ್ ಪರೀಕ್ಷೆಗೆ 1410755 ವಿದ್ಯಾರ್ಥಿಗಳು ಹಾಜರಾಗಿದ್ದರು. ಅವರಲ್ಲಿ 797042 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ರಾಜಸ್ಥಾನ‌ದ ಜೈಪುರ ವಿದ್ಯಾರ್ಥಿ ನಳೀನ್ ಖಾಂದೆಲ್​ವಾಲ್​​​ ದೇಶಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ದೆಹಲಿ ಮೂಲದ ಭವೀಕ್ ಬನ್ಸಾಲ್ ಮತ್ತು ಉತ್ತರ ಪ್ರದೇಶದ ಅಕ್ಷತ್ ಕೌಶಿಕದ 2 ಮತ್ತು 3 ನೇ ಸ್ಥಾನ ಗಳಿಸಿದ್ದಾರೆ. ಫಣೀಂದ್ರ ಡಿ ಕೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಪ್ರಗ್ಯಾ ಮಿತ್ರ ಎರಡನೇ ಸ್ಥಾನ ಪಡೆದಿದ್ದಾರೆ. ಫಣೀಂದ್ರ ದೇಶದಲ್ಲಿ 36 ನೇ ರ್ಯಾಂಕ್ ಪಡೆದಿದ್ದಾರೆ.

14,10755 ವಿದ್ಯಾರ್ಥಿಗಳು ನೀಟ್​ ಪರೀಕ್ಷೆಗೆ ಹಾಜರಾಗಿದ್ದರು. ಅವರಲ್ಲಿ 7,97,042 ಅಭ್ಯರ್ಥಿಗಳು ಉತ್ತಿರ್ಣರಾಗಿದ್ದಾರೆ. 1017 ವಿದ್ಯಾರ್ಥಿಗಳು ಕನ್ನಡದಲ್ಲಿ ಪರೀಕ್ಷೆ ತೆಗೆದುಕೊಂಡಿದ್ದರು. ಒಟ್ಟಾರೆ ಫಲಿತಾಂಶದಲ್ಲಿ ರಾಜಸ್ಥಾನ ಮೊದಲು, ದೆಹಲಿ ದ್ವಿತೀಯ ಹಾಗೂ ಆಂಧ್ರಪ್ರದೇಶ ಮೂರನೇ ಸ್ಥಾನ ಪಡೆದಿದೆ. ಕರ್ನಾಟಕ ರಾಜ್ಯ ಶೇ.63.51 ರಷ್ಟು ಫಲಿತಾಂಶ ಗಳಿಸಿದೆ.

ಫಲಿತಾಂಶ ಹಾಗೂ ನೀಟ್‌ ಕುರಿತ ಇತರೆ ಹೆಚ್ಚುವರಿ ಮಾಹಿತಿಗಾಗಿ ನೀಟ್‌ ಅಧಿಕೃತ ವೆಬ್‌ಸೈಟ್‌ www.ntaneet.nic.in ನಲ್ಲಿ ಮಾತ್ರ ಲಭ್ಯವಾಗಲಿದೆ. ಹೀಗಾಗಿ ಇತ್ತೀಚಿನ ಮಾಹಿತಿಗಾಗಿ ಆಗಾಗ ನೀಟ್‌ ಅಧಿಕೃತ ವೆಬ್‌ಸೈಟ್‌ www.ntaneet.nic.in ಗೆ ಭೇಟಿ ಕೊಡಿ.

ದೇಶಾದ್ಯಂತ ಮೇ 5 ರಂದು 156 ಕೇಂದ್ರಗಳಲ್ಲಿ ನೀಟ್​ ಪರೀಕ್ಷೆಯನ್ನು ನಡೆಸಲಾಗಿತ್ತು.  ಕರ್ನಾಟಕದಲ್ಲಿ ಹಂಪಿ ಎಕ್ಸ್​ಪ್ರೆಸ್​​ ರೈಲು ವಿಳಂಬ ಕಾರಣ ಮತ್ತು ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿ ಫನಿ ಚಂಡಮಾರುತದ ಪರಿಣಾಮದಿಂದಾಗಿ ಈ ಎರಡು ರಾಜ್ಯಗಳಲ್ಲಿ ಮೇ 20 ರಂದು ನೀಟ್​ ಮರು ಪರೀಕ್ಷೆ ನಡೆಸಲಾಗಿತ್ತು.

Share Post

Leave a Reply

error: Content is protected !!