ರಸ್ತೆ ಅಗಲೀಕರಣ ಮತ್ತು ರಸ್ತೆ ಸುಧಾರಣೆಗೆ ಸವದಿ ಚಾಲನೆ

ಬಾಗಲಕೋಟ : ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ  ತಾಲ್ಲೂಕಿನ ರಬಕವಿ ನಾಕದಲ್ಲಿ ರಸ್ತೆ ಅಗಲೀಕರಣ ಮತ್ತು ರಸ್ತೆ ಸುಧಾರಣೆಗೆ ಭೂಮಿ ಪೂಜೆ ಮಾಡುವುದರ ಮೂಲಕ ಅಧಿಕೃತ ಚಾಲನೆ ನೀಡಿದರು.

ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ವತಿಯಿಂದ 2019-20 ನೇ ಸಾಲಿನ ಲೆಕ್ಕಶೀರ್ಷಿಕೆ 5054 ಅನುಬಂಧ ಇ ಯೋಜನೆಯಡಿಯಲ್ಲಿ ಜಾಂಬೋಟಿ ರಬಕವಿ ರಾಷ್ಟ್ರೀಯ ಹೆದ್ದಾರಿ ರಸ್ತೆ ಅಗಲೀಕರಣ ಮತ್ತು ರಸ್ತೆ ಸುಧಾರಣೆ ಅಭಿವೃದ್ಧಿಗೋಸ್ಕರ 200.00 ಲಕ್ಷ ರೂಪಾಯಿ ವೆಚ್ಚದಲ್ಲಿ 54 ಕಿ.ಲೋ 139.60 ಕಿ.ಲೋ ದಿಂದ 140.60 ಕಿ.ಲೋ ಅಭಿವೃದ್ಧಿಗಾಗಿ ಭೂಮಿಪೂಜೆ ಮಾಡಿ ಅಧಿಕೃತವಾಗಿ ತೇರದಾಳ ಮತ ಕ್ಷೇತ್ರದ ಶಾಸಕ ಸಿದ್ದು ಸವದಿ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಸಂಜಯ ತೆಗ್ಗಿ,ಮಾರುತಿ ಗಾಡಿವಡ್ಡರ,ಮಹಾದೇವ ಕೋಟ್ಯಾಳ,ಜಯಪ್ರಕಾಶ ಸೊಲ್ಲಾಪುರ,ರಾಜು ಸಾಬೋಜಿ,ಶ್ರೀಶೈಲ ದಲಾಲ,ಪರಪ್ಪ ಉರಬಿನವರ,ಪ್ರಭು ಪೂಜೇರಿ ಹಣಮಂತ ಪೂಜಾರಿ,ಹನುಮಂತ ಹನಗಂಡಿ,ಪ್ರಕಾಶ  ಯಂಡಿಗೇರಿ,ಪಾಲಬಾವಿ,ಲೋಕೋಪಯೋಗಿ ಅಧಿಕಾರಿಗಳು ಸೇರಿದಂತೆ ಹಲವರು ಪಾಲ್ಗೊಂಡಿದ್ದರು. 

Share Post

Leave a Reply

Your email address will not be published. Required fields are marked *

error: Content is protected !!