ರಂಜಾನ್ ಪ್ರಯುಕ್ತ ಬೆಂಗಳೂರಲ್ಲಿ ಹಲವೆಡೆ ವಾಹನ ಸಂಚಾರ ಮಾರ್ಗ ಬದಲಾವಣೆ

ಬೆಂಗಳೂರು: ರಂಜಾನ್ ಹಬ್ಬದ ಪ್ರಯುಕ್ತ ಸಂಚಾರ ಪೂರ್ವ ವಿಭಾಗದ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ನಡೆಯುವ ಪ್ರಾರ್ಥನಾ ಕೂಟಗಳಿಗೆ ಸೂಕ್ತ ಸಂಚಾರ ಬಂದೋಬಸ್ತ್ ವ್ಯವಸ್ಥೆ ಮಾಡಿ ವಾಹನಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.

ಕೆಜಿ ಹಳ್ಳಿ ಸಂಚಾರ ಠಾಣಾ ವ್ಯಾಪ್ತಿಯ ಉಮರ್ ಬಿನ್ ಮಸೀದಿ ಹತ್ತಿರ ನಾಗಾವಾರ ಮುಖ್ಯರಸ್ತೆಯಲ್ಲಿ ಪ್ರಾರ್ಥನಾ ಕೂಡ ನಡೆಯುವುದರಿಂದ ನಾಗವಾರದಿಂದ ನರೇಂದ್ರ ಟೆಂಟ್ ಪೆರಿಯಾರ್ ನಗರದ ಕಡೆಗೆ ಬರುವ ವಾಹನಗಳನ್ನು ಹೊರ ರಿಂಗ್ ರಸ್ತೆಯಲ್ಲೇ ನಿರ್ಬಂಧಿಸಿ ಹೆಣ್ಣೂರು ಜಂಕ್ಷನ್ ಕಡೆಗೆ ಮಾರ್ಗ ಬದಲಾವಣೆ ಮಾಡಿ ಲಿಂಗರಾಜಪುರ ಆಯಿಲ್‍ಮಿಲ್ ಮುಖಾಂತರ ಮುಂದೆ ಸಾಗಬಹುದಾಗಿದೆ.

ಗೋವಿಂದಪುರದಿಂದ ನರೇಂದ್ರ ಟೆಂಟ್ ಕಡೆಗೆ ಬರುವ ವಾಹನಗಳನ್ನು ಟೆಂಟ್ ಬಳಿ ನಿರ್ಬಂಧಿಸಿ ಎಡ ತಿರುವು ಪಡೆದುಕೊಂಡು ಬಿಡಿಎ ಕಾಂಪ್ಲೆಕ್ಸ್ ಸಿದ್ದಪ್ಪರೆಡ್ಡಿ ಸರ್ಕಲ್ ಸೇರಿ ಲಿಂಗರಾಜಪುರ ಮುಖಾಂತರ ಮುಂದೆ ಸಾಗಬಹುದಾಗಿದೆ.

ಟ್ಯಾನರಿ ರಸ್ತೆಯ ಈದ್ಗಾ ಮೈದಾನದಲ್ಲೂ ಪ್ರಾರ್ಥನಾ ಕೂಟ ನಡೆಯುವುದರಿಂದ ಎಂಜಿ ರಸ್ತೆ ಕಡೆಗೆ ಸಂಚಾರ ಮಾರ್ಗ ಬದಲಾವಣೆ ಮಾಡಿ ಮಾಸ್ಕ್ ರಸ್ತೆ ಮುಖಾಂತರ ಡೇವೀಸ್ ರಸ್ತೆ, ಲಿಂಗರಾಜಪುರ, ಹೆಣ್ಣೂರು ಮುಖ್ಯರಸ್ತೆಗೆ ತೆರಳಬಹುದಾಗಿದೆ.

ಪುಲಕೇಶಿನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಮಿಲ್ಲರ್ ರಸ್ತೆಯ ಈದ್ಗಾ ಮೈದಾನ (ಹಜ್ ಕ್ಯಾಂಪ್)ದ ಬಳಿ ವಾಹನಗಳನ್ನು ನಿರ್ಬಂಧಿಸಿ ಸುಲ್ತಾನಾ ಜಿ.ಗುಂಟಾ ರಸ್ತೆ ಕಡೆಗೆ ಮಾರ್ಗ ಬದಲಾವಣೆ ಮಾಡಲಾಗಿದೆ.

ಜಯಮಹಲ್ ಕಡೆಯಿಂದ ಹಜ್ ಕ್ಯಾಂಪ್ ಕಡೆಗೆ ಬರುವ ವಾಹನಗಳನ್ನು ಕಂಟೋನ್ಮೆಂಟ್ ಅಂಡರ್‍ಬ್ರಿಡ್ಜ್ ಬಳಿ ಮಾರ್ಗ ಬದಲಾವಣೆ ಮಾಡಿ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಮೂಲಕ ತೆರಳಬಹುದಾಗಿದೆ. ನಂದಿದುರ್ಗ ರಸ್ತೆಯಲ್ಲಿ ಹಜ್ ಕ್ಯಾಂಪ್ ಕಡೆಗೆ ಬರುವ ವಾಹನಗಳನ್ನು ಬೆಂಸನ್‍ಟನ್ ಟೌನ್ ಬಳಿ ನಿರ್ಬಂಧಿಸಿ ಟ್ಯಾನರಿ ರಸ್ತೆ ಸೇರಿ ಮುಂದೆ ಸಾಗಬಹುದಾಗಿದೆ.

Share Post

Leave a Reply

Your email address will not be published. Required fields are marked *

error: Content is protected !!