ತಿರುಪತಿ ತಿಮ್ಮಪ್ಪನಿಗೆವಿಶೇಷ ಪೂಜೆ ಸಲ್ಲಿಸಿದ – ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

ತಿರುಪತಿ: ವಿಶ್ವ ವಿಖ್ಯಾತ ತಿರುಪತಿ ದೇವಸ್ಥಾನಕ್ಕೆ ಉಪರಾಷ್ಟ್ರಪತಿ ಡಾ. ಎಂ. ವೆಂಕಯ್ಯ ನಾಯ್ಡು ಭೇಟಿ ನೀಡಿ ವೆಂಕಟೇಶ್ವರನಿಗೆ ವಿಶೇಷ ಪ್ರಾರ್ಥನೆ ಪೂಜೆ ಸಲ್ಲಿಸಿದರು. ಎರಡು ದಿನಗಳ ಧಾರ್ಮಿಕ ಪ್ರವಾಸದ ಅಂಗವಾಗಿ ತಮ್ಮ ಕುಟುಂಬದ ಸದಸ್ಯರದಿಗೆ ನಿನ್ನೆ ಸಂಜೆ ತಿರುಪತಿಗೆ ಆಗಮಿಸಿದ ಅವರು,ತಿರುಮಲ, ತಿರುಪತಿ ದೇವಸ್ಥಾನಂ ಟ್ರಸ್ಟ್‍ನ(ಟಿಟಿಡಿ) ವಿಶೇಷ ಅತಿಥಿ ಗೃಹದಲ್ಲಿ ರಾತ್ರಿ ವಾಸ್ತವ್ಯ ಹೂಡಿದ್ದರು. ಇಂದು ಮುಂಜಾನೆ ತಮ್ಮ ಕುಟುಂಬ ಸದಸ್ಯರೊಂದಿಗೆ ತಿರುಮಲ ಬೆಟ್ಟದ ಶ್ರೀ ವೆಂಕಟೇಶ್ವರನ ಸನ್ನಿಧಾನಕ್ಕೆ ತೆರಳಿ ವಿಶೇಷ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಿದರು.

ದೇವಸ್ಥಾನದಲ್ಲಿ ಆಡಳಿತ ಮಂಡಳಿ ಉಪರಾಷ್ಟ್ರಪತಿ ಅವರಿಗೆ ಪವಿತ್ರ ರೇಷ್ಮೆ ವಸ್ತ್ರ ಮತ್ತು ಪ್ರಸಾದ ನೀಡಿದರು. ದೇವರ ಸನ್ನಿಧಿಯಲ್ಲಿ ಅರ್ಧತಾಸು ಕಳೆದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೆಂಕಟೇಶ್ವರ ನಮ್ಮ ದೇವರು.ಈ ದೇವರ ಹೆಸರನ್ನೇ ನನಗೆ ನಾಮಕರಣ ಮಾಡಲಾಗಿದೆ. ಇಡೀ ಕುಟುಂಬ ತಿರುಪತಿಯ ಪರಮಭಕ್ತರು ಎಂದು ಹೇಳಿದರು.

Share Post

Leave a Reply

Your email address will not be published. Required fields are marked *

error: Content is protected !!