ಮಾಧ್ಯಮದವರ ಮೇಲೆ ಖಾಕಿ ದರ್ಪ.. ತಪ್ಪನ್ನರಿತು ಪತ್ರಕರ್ತರ ಕ್ಷಮೆಯಾಚಿಸಿದ ಎಸಿಪಿ‌..!

ಬೆಂಗಳೂರು: ದೇವನಹಳ್ಳಿ ಪುರಸಭೆ ಚುನಾವಣೆ ಫಲಿತಾಂಶ ವರದಿಗೆ ತೆರಳಿದ್ದ ಮಾಧ್ಯಮದವರ ಮೇಲೆ ಎಸಿಪಿ ದೌರ್ಜನ್ಯ ಎಸಗಿರುವ ಘಟನೆ ನಡೆದಿದೆ. ಇದನ್ನು ಖಂಡಿಸಿ ಮಾಧ್ಯಮದವರು ಪ್ರತಿಭಟನೆಗೆ ಮುಂದಾಗಿದ್ದರು. ಕೊನೆಗೆ ಎಸಿಪಿ ತಮ್ಮ ತಪ್ಪನ್ನು ಅರಿತು ಕ್ಷಮೆ ಕೇಳಿದ ಮೇಲೆ ಪತ್ರಕರ್ತರು ಪ್ರತಿಭಟನೆ ಕೊನೆಗೊಳಿಸಿದರು.

ದೇವನಹಳ್ಳಿ ಪಟ್ಟಣದ ತಾಲೂಕು ಕಚೇರಿಯಲ್ಲಿ ಇಂದು ಪುರಸಭಾ ವಾರ್ಡ್ ವಾರು ಮತ ಎಣಿಕೆ ಕಾರ್ಯ ನಡೆದಿತ್ತು. ಇದರ ವರದಿಗೆ ತೆರಳಿದ್ದ ಮಾಧ್ಯಮದವರ ಮೇಲೆ ಏಕಾಏಕಿ ಎಸಿಪಿ ಮುರಳಿ ದೌರ್ಜನ್ಯ ಎಸಗಿದ್ದಾರೆ. ನಿಮ್ಮನ್ನು ಇಲ್ಲಿಗೆ ಬಿಟ್ಟವರು ಯಾರು, ನಿಮ್ಮೆಲ್ಲರ ಮೇಲೆ ದೂರು ದಾಖಲಿಸಿ ಜೈಲಿಗಟ್ಟುತ್ತೇನೆ ಎಂದು ಬೆದರಿಸಿದ್ದಾರೆ. ಇದರಿಂದ ಕೋಪಗೊಂಡ ಪತ್ರಕರ್ತರು ತಮ್ಮ ಮೇಲೆ ದೈಹಿಕ ಹಲ್ಲೆ ನಡೆಸಿದ ಎಸಿಪಿ ಮುರಳಿ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದರು.

ಈ ಕುರಿತಂತೆ ಮಾಧ್ಯಮದವರು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರು. ಯಾವಾಗ ಹಿರಿಯ ಅಧಿಕಾರಿಗಳು ಎಸಿಪಿ ಮುರಳಿ ವರ್ತನೆ ಬಗ್ಗೆ ಬೇಸರ ವ್ಯಕ್ತಪಡಿಸಿದರೋ ಕೂಡಲೇ ಎಸಿಪಿ ಮುರಳಿ ಅವರು ಪ್ರತಿಭಟನಾ ನಿರತರ ಬಳಿ ತೆರಳಿ ಕ್ಷಮೆ ಕೋರಿದರು. ಇದರಿಂದ ಮಾಧ್ಯಮದವರು ಪ್ರತಿಭಟನೆಯನ್ನು ಕೈ ಬಿಟ್ಟರು. ಈ ಹಿಂದೆನೂ ಎರಡು ಬಾರಿ ಎಸಿಪಿ ಮುರಳಿ ಮಾಧ್ಯಮದವರ ವಿರುದ್ಧ ಉದ್ದಟತನ ತೋರಿಸಿದ್ದರೆಂಬ ಆರೋಪವಿದೆ.

Share Post

Leave a Reply

error: Content is protected !!