ಖಡಕ್ ಐಪಿಎಸ್ ಅಧಿಕಾರಿ ಕರ್ನಾಟಕದ ಸಿಂಗಂ ಅಣ್ಣಾಮಲೈ ರಾಜೀನಾಮೆ .ರಾಜಕೀಯಕ್ಕೆ ಎಂಟ್ರಿ . ಖಾಕಿ ಕಳಚಿಟ್ಟು ಖಾದಿ ತೊಡಲು ರೆಡಿ . ಹಾಗಾದರೆ ಅಣ್ಣಾಮಲೆ ಯಾವ ಪಕ್ಷ ಸೇರುತ್ತಾರೆ .ಬಿಜೆಪಿ …? ಕಾಂಗ್ರೆಸ್ …?

ಬೆಂಗಳೂರು: ಕರ್ನಾಟಕದ ಸಿಂಗಂ, ಸೂಪರ್ ಕಾಪ್ ಹಾಗೂ ದಕ್ಷ ಅಧಿಕಾರಿ ಎಂದೇ ಜನಪ್ರಿಯರಾಗಿರುವ ಐಪಿಎಸ್ ಅಧಿಕಾರಿ ಅಣ್ಣಾಮಲೈ ಇದೀಗ ಖಾಕಿ ಗೆ ಗುಡ್ ಬೈ ಹೇಳಿ ರಾಜಕೀಯ ಅಖಾಡಕ್ಕೆ ಧುಮುಕಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ.ಪೊಲೀಸ್ ವೃತ್ತಿಗೆ ಇನ್ನು ಕೆಲವೇ ದಿನಗಳಲ್ಲಿ ರಾಜೀನಾಮೆ‌‌ ನೀಡಿ ತಮಿಳುನಾಡು ರಾಜಕೀಯಕ್ಕೆ ಎಂಟ್ರಿ‌‌ ಕೊಡಲಿದ್ದಾರೆ ಎನ್ನಲಾಗುತ್ತಿದೆ. ತಮಿಳುನಾಡು ರಾಜಕೀಯಕ್ಕೆ ಎಂಟ್ರಿ ಡಿಎಂಕೆ ಪಕ್ಷ ಸೇರಲು ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ ಈ‌‌ ಮೂಲಕ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಳ್ಳಲಿದ್ದಾರೆ ಎನ್ನಲಾಗಿದೆ.ಸದ್ಯ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಆಗಿರುವ ಅಣ್ಣಾಮಲೈ‌ ಕಳೆದ ಹತ್ತು ದಿನಗಳಿಂದ ರಜೆಯಲ್ಲಿದ್ದಾರೆ. 2011ರ ಬ್ಯಾಚ್ ಐಪಿಎಸ್ ಅಧಿಕಾರಿ ಅಣ್ಣಾಮಲೈ ಈ ಹಿಂದೆ ಚಿಕ್ಕಮಗಳೂರು ಹಾಗೂ ಕಾರ್ಕಳ ಎಸ್ಪಿಯಾಗಿ ಕಾರ್ಯನಿರ್ವಹಿಸಿದ್ದರು. ಈ ಬಗ್ಗೆ ಸ್ಪಷ್ಟನೆಗೆ ಅಣ್ಣಾಮಲೈ ದೂರವಾಣಿ ಸಂಪರ್ಕಕ್ಕೆ ಇನ್ನೂ ಸಿಕ್ಕಿಲ್ಲ.

Share Post

Leave a Reply

error: Content is protected !!