ಕೆಜಿಎಫ್ ಸರ್ವಾಜನಿಕ ಆಸ್ಪತ್ರೆಯಲ್ಲೊಂದು ಅಮಾನವೀಯ ಘಟನೆ

ಕೋಲಾರ: ಹೆರಿಗೆಗೆಂದು ಬಂದ ಮಹಿಳೆಗೆ ಚಿಕಿತ್ಸೆ ನೀಡದೇ ಹೆರಿಗೆ ನೋವಿನಿಂದ ಆಸ್ಪತ್ರೆಯಲ್ಲೆ ಬಿದ್ದು ಗರ್ಬೀಣಿ ನರಳುತ್ತಿರುವ ದೃಶ್ಯ ಮನಕಲುಕುವಂತಿದೆ.

ಹೌದು ಇದು ಕೋಲಾರ ಜಿಲ್ಲೆಯ ಕೆಜಿಎಫ್ ನ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಘಟನೆ.

ತಡ ರಾತ್ರಿ ಹೆರಿಗೆಂದು ಬಂದ ಮಹಿಳೆಗೆ ಸಕಾಲಕ್ಕೆ ಚಿಕಿತ್ಸೆ ನೀಡದೆ ,ಸರ್ಜನ್ ಶಿವಕುಮಾರ್ ಅಮಾನವೀಯ ವರ್ತನೆ ವೈದ್ಯ ಲೋಕಕ್ಕೆ ಕಪ್ಪು ಚುಕ್ಕೆಯಾಗಿದೆ.

ಕೆಜೆಎಫ್ ನ 4 ನೇ ಬ್ಲಾಕ್ ರಿಯಾಜ್ ಎಂಬುವವರ ಪತ್ನಿ ಸಮೀನಾ ಹೆರಿಗೆ ನೋವಿನಿಂದ ನರಳುತ್ತಿರುವಮಹಿಳೆಯಾಗಿದ್ದಾರೆ .
ಇನ್ನು ಸಮಯಕ್ಕೆ ಸರಿಯಾದ ಚಿಕಿತ್ಸೆ ನೀಡದೆ ಗಂಟೆಗಳ ಕಾಲ ನರಳಾಟ ನಡೆಸಿದ ನಂತರ ಬಂದ ವ್ಯೆದ್ಯ ಇಲ್ಲಿ ಆಗೊಲ್ಲ ಕೋಲಾರ ಕ್ಕೆ ಹೋಗಿ ಎಂದಿದ್ದಾರೆ.

ಆಂಬ್ಯಲೆನ್ಸ್ ಮೂಲಕ ಕೋಲಾರ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದ್ದು ಹೆಚ್ಚಿನ ಚಿಕಿತ್ಸೆಗೆಂದು ಮಹಿಳೆಯನ್ನ ಕೋಲಾರದ ಆರ್.ಎಲ್ .ಜಾಲಪ್ಪ ಆಸ್ಪತ್ರೆಯಲ್ಲಿ ದಾಖಲು ಪಡಿಸಿ ಚಿಕಿತ್ಸೆ ನೀಡಿ ಹೆರಿಗೆ ಮಾಡಿಸಲಾಯಿತು.ಆದ್ರೆ ಮಗು ತಾಯಿ ಹೊಟ್ಟೆಯಲ್ಲಿ ಮೃತ ಪಟ್ಟಿದ್ದು ಕುಟುಂಬಸ್ಥರಿಗೆ ಆಘಾತವಾಗಿದೆ.

ಸಕಾಲಕ್ಕೆ ಚಿಕಿತ್ಸೆ ಇಲ್ಲದ ಕಾರಣ ಮಗು‌ಸಾವಿಗೆ ಕಾರಣ ಎಂದು ವೈದ್ಯರ ವಿರುದ್ಧ ದೂರಿದರು.

ಕೆಜಿಎಫ್ ನ ಸರ್ಕಾರಿ ಆಸ್ಪತ್ರೆಯಲ್ಲಿ ಇಂತಹ ಘಟನೆಗಳು ಆಗಾಗ ನಡೆಯುತ್ತಿದ್ದರೂ ಜಿಲ್ಲಾ ಆರೋಗ್ಯಾಧಿಕಾರಿಗಳು ಮಾತ್ರ ಯಾವುದನ್ನೂ ಕಂಡೂ ಕಾಣದಂತೆ ಮೌನಕ್ಕೆ ಶರಣಾಗಿದ್ದಾರೆ .

ಇನ್ನು ಗರ್ಭಿಣಿ ಮಹೀಳೆ ಹೆರಿಗೆ ನೋವಿನಿಂದ ನರಳಾಡುತ್ತಿರುವ ವಿಡಿಯೋ ಎಂತಹ ಕಲ್ಲು ಮನಸ್ಸಿನವರಿಗೂ ಕಣ್ಣಂಚಲಿ ನೀರು ತರಿಸುವಂತೆ ಮಾಡಿದ್ದು,

ಆಸ್ಪತ್ರೆ ಸಿಬ್ಬಂದಿ ಹಾಗೂ ವೈದ್ಯರ ವಿರುದ್ದ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ .

ಇದಕ್ಕೆ ಸಂಭಂದ ಪಟ್ಟ ಹಿರಿಯ ಅಧಿಕಾರಿಗಳು ಸರ್ಕಾರಿ ಆಸ್ಪತ್ರೆಗಳ ಇಂತಹ ಘಟನೆಗಳು ಮರುಕಳಿಸಿದಂತೆ ಎಚ್ಚರ ವಹಿಸಿ ತಪ್ಪಿತಸ್ಥರ ವಿರುದ್ದ ಕ್ರಮ ಜರುಗಿಸ್ತಾರ ಅನ್ನೋದನ್ನ ಕಾದು ನೋಡಬೇಕಿದೆ

Share Post

Leave a Reply

error: Content is protected !!