ಚಾಮರಾಜನಗರದಲ್ಲಿ ಶ್ರೀನಿವಾಸ್ ಪ್ರಸಾದ್‌ಗೆ 341ಮತಗಳ ರೋಚಕ ಜಯ..!

ಚಾಮರಾಜನಗರ : ಕೊನೆ ಕ್ಷಣದವರೆಗೂ ರೋಚಕ ಹಣಾಹಣಿಯಿಂದ ಕೂಡಿದ್ದ ಚಾಮರಾಜನಗರ ಲೋಕ್ಸಭಾ ಕ್ಷೇತ್ರದ ಚುನಾವಣೆಯಲ್ಲಿ ಮಾಜಿ ಸಚಿವ ವಿ. ಶ್ರೀನಿವಾಸ್ ಪ್ರಸಾದ್ ರೋಚಕ ಗೆಲುವು ಸಾಧಿಸಿದ್ದಾರೆ.

ಕೊನೆ ಕ್ಷಣದವರೆಗೂ ತೂಗುಯ್ಯಾಲೆಯಲ್ಲಿದ್ದ ಗೆಲುವು ಕೊನೆ ಕ್ಷಣದವರೆಗೂ ಚಂಚಲೆಯಾಗಿತ್ತು. ಅಂತಿಮ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ 341 ಮತಗಳ ಅಂತರದಿಂದ ವಿಜೇತರಾಗಿ ಕಾಂಗ್ರೆಸ್ ಅಭ್ಯರ್ಥಿ ಆರ್ ಕೆ ಧ್ರುವನಾರಾಯಣ್ ಅವರನ್ನು ಪರಾಭವಗೊಳಿಸಿದರು.

ಆರಂಭದ ಸುತ್ತಿನಿಂದಲ್ಲೂ ಧ್ರುವನಾರಾಯಣ್ ಕೆಲವೇ ಸಾವಿರ ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದರು. ಹೀಗಾಗಿ ಕೊನೆ ಕ್ಷಣದವರೆಗೂ ಗೆಲುವು ಯಾರಿಗೆ ಎಂಬುದು ಊಹೆಗೂ ನಿಲುಕದ ರೀತಿಯಲ್ಲಿತ್ತು.

ಕೊನೆ 2 ಸುತ್ತಿನ ಮತಗಳ ಎಣಿಕೆಯಲ್ಲಿ ಶ್ರೀನಿವಾಸ್ ಇದ್ದಕ್ಕಿದ್ದಂತೆ ಮುನ್ನಡೆ ಕಾಯ್ದುಕೊಂಡು ಕಾಂಗ್ರೆಸ್ ಅಭ್ಯರ್ಥಿಯನ್ನು ಹಿಂದಿಕ್ಕಿದರು, ಅಂತಿಮವಾಗಿ 341 ಮತಗಳಿಂದ ಅಂತರದಿಂದ ಗೆಲುವಿನ ನಗೆ ಬೀರಿದರು.

ಈ ಹಿಂದೆ ಶ್ರೀನಿವಾಸ್ ಪ್ರಸಾದ್ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಸಂಪುಟದಲ್ಲಿ ಸಚಿವರಾಗಿ ಕೆಲಸ ಮಾಡಿದ ಅನುಭವವಿದೆ. ಹೀಗಾಗಿ ಪ್ರಧಾನಿ ಮೋದಿ ಸಂಪುಟದಲ್ಲಿ ಅವರಿಗೆ ಖಾತೆ ಸಿಗುವ ನಿರೀಕ್ಷೆಯಿದೆ.

Share Post

Leave a Reply

error: Content is protected !!