ಫಲಿತಾಂಶ ಹಿನ್ನೆಲೆ ಮಂಡ್ಯದಲ್ಲಿ ಹೈ ಅಲರ್ಟ್

ಮಂಡ್ಯ: ಮೇ.23ಕ್ಕೆ ಲೋಕಸಭಾ ಚುನಾವಣಾ ಫಲಿತಾಂಶ ಹೊರಬೀಳಲಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮಂಡ್ಯದಲ್ಲಿ 1 ಸಾವಿರಕ್ಕೂ ಹೆಚ್ಚು ಪೊಲೀಸರು ನಿಯೋಜನೆಗೊಂಡಿದ್ದಾರೆ. ಫಲಿತಾಂಶದ ಬಳಿಕ ಅಹಿತಕರ ಘಟನೆ ನಡೆಯುವ ಸಾಧ್ಯತೆ ಇದೆ, ಹೀಗಾಗಿ ಜಿಲ್ಲೆಯಾದ್ಯಂತ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ತುಮಕೂರು, ಹಾಸನ, ಮೈಸೂರು, ರಾಮನಗರ, ಸೇರಿದಂತೆ ವಿವಿಧ ಜಿಲ್ಲೆಗಳ ಪೊಲೀಸ್ ಅಧಿಕಾರಿಗಳು ನಿಯೋಜನೆಗೊಂಡಿದ್ದಾರೆ. ಇನ್ನು ಮೇ 23ರಂದು ಬೆಳಿಗ್ಗೆ 6ರಿಂದ, ಮೇ 24ರ ಮಧ್ಯರಾತ್ರಿವರೆಗೂ 144 ಸೆಕ್ಷನ್ ಜಾರಿಯಾಗಿದೆ

Share Post

Leave a Reply

Your email address will not be published. Required fields are marked *

error: Content is protected !!