ಮಲ್ಲಿಕಾರ್ಜುನ್ ಖರ್ಗೆ ಸಿಎಂ ಆಗುವ ಎಲ್ಲ ಅರ್ಹತೆ ಇದೆ ಆದ್ರೆ..! – ಆರ್​.ವಿ ದೇಶಪಾಂಡೆ

ಬೆಳಗಾವಿ: ಕಾಂಗ್ರೆಸ್​ ಹಿರಿಯ ಮುಖಂಡ, ಮಾಜಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಖ್ಯಮಂತ್ರಿ ಆಗುವ ಎಲ್ಲ ಅರ್ಹತೆ ಇದೆ, ಅದರಲ್ಲಿ ಎರಡು ಮಾತಿಲ್ಲ. ಆದರೆ, ಈ ರೀತಿಯ ವಿಚಾರಗಳು ಪ್ರಸ್ತಾಪವಾಗಬಾರದು ಮಾಧ್ಯಮಗಳಲ್ಲಿ ಈ ರೀತಿ ಬರಬಾರದು ಎಂದು ದಲಿತ ಸಿಎಂ ಪ್ರಸ್ತಾಪ ವಿಚಾರಕ್ಕೆ ಕಂದಾಯ ಸಚಿವ ಆರ್.​ವಿ ದೇಶಪಾಂಡೆ ಸಿಡಿಮಿಡಿಗೊಂಡಿದ್ದಾರೆ.

ದಲಿತ ಸಿಎಂ ಕೂಗು ಮತ್ತೆ ಚಾಲ್ತಿಯಲ್ಲಿರುವ ವಿಷಯಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಮಾಡೋದಿದ್ರೆ ಮಾಡಿ ಬಿಡಿ. ಮುಖ್ಯಮಂತ್ರಿಗಳು ಕೂಡ ಈ ಸಂದರ್ಭದಲ್ಲಿ ದಲಿತ ಸಿಎಂ ವಿಚಾರ ಪ್ರಸ್ತಾಪಿಸಿರುವುದು ಸರಿಯಲ್ಲ ಅದರ ಅವಶ್ಯಕತೆ ಇದ್ದಿರಲಿಲ್ಲ, ಒಂದೇ ಕಡೆ ಸಿದ್ದರಾಮಯ್ಯ ಆಗಬೇಕು ಅಂತ ಹೇಳೋದು ಮತ್ತೊಂದು ಕಡೆ ಮತ್ತೊಬ್ಬರು ಆಗಬೇಕು ಅಂತ ಹೇಳೋದು ಸರಿಯಲ್ಲ ಎಂದು ಅವರು ನುಡಿದರು.

ಈಗಾಗಲೇ ಅಗ್ರಿಮೆಂಟ್ ಆಗಿದೆ ಅಂದಾಗ ಆ ಪ್ರಸ್ತಾಪ ಏಕೆ ಬೇಕಿತ್ತು, ಮಾಡೋದಿದ್ರೆ ಮಾಡಿ ಬಿಡಿ. ಅನವಶ್ಯಕ ಚರ್ಚೆ ಯಾಕೆ ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಟಾಂಗ್ ನೀಡುವ ರೀತಿ ಸಚಿವ ದೇಶಪಾಂಡೆ ಹೇಳಿದ್ದು ಮುಖ್ಯಮಂತ್ರಿ ಸ್ಥಾನ ಖಾಲಿ ಇದ್ದಾಗ ಯಾರಾಗಬೇಕು. ಯಾರಾಗಬಾರದು ಅಂತ ಚರ್ಚೆ ಮಾಡಲಿ ಆದರೆ ಇವತ್ತು ಸಿಎಂ ಸ್ಥಾನ ಖಾಲಿ ಇಲ್ಲ ಅಂದಮೇಲೆ ಚರ್ಚೆ ಏಕೆ(?) ಮಾತನಾಡಿದ್ದಾರೆ.

ವಿನಾಕಾರಣ ವಾದ ವಿವಾದ, ಅನವಶ್ಯಕ ಮನಸ್ತಾಪ ಯಾಕೆ ಎಂದು ಪ್ರಶ್ನಿಸಿದ ದೇಶಪಾಂಡೆ, ರಾಜಕಾರಣದಲ್ಲಿ ಬಹಳ ಕಡಿಮೆ ಮಾತಾಡಬೇಕು, ಮಾತುಗಳು ತೂಕದಿಂದ ಕೂಡಿರಬೇಕು ಆವಾಗ ಅದಕ್ಕೆ ಗೌರವ ಸಿಗುತ್ತದೆ ಇದನ್ನ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು ಟಿವಿ ಮಾಧ್ಯಮಗಳು ಮುಂದಿವೆ ಅಂತಾ ಬೇಕಾದುದನ್ನ ಮಾತಾಡಬಾರದು ಮಾಧ್ಯಮಗಳು ಅದರ ಲಾಭ ಪಡೆಯುತ್ತವೆ ಎಂದು ಕಂದಾಯ ಸಚಿವ ಆರ್​.ವಿ ದೇಶಪಾಂಡೆ ಹೇಳಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!