ಪತ್ನಿಯನ್ನೇ ಹತ್ಯೆಗೈದ ಪಾಪಿ ಗಂಡ…

ಧಾರವಾಡ: ಆಗಿದ್ದನ್ನು ಮರೆತು ನಿನ್ನ ಜೊತೆಗೆ ಬದುಕುತ್ತೇನೆ ಎಂದು ಹೇಳಿದ ಪತಿಯೊಬ್ಬ ಪತ್ನಿಯನ್ನು ಬರ್ಬರವಾಗಿ ಕೊಲೆಗೈದ ಘಟನೆ ನವಲಗುಂದ ತಾಲೂಕು ಶಲವಡಿ ಗ್ರಾಮದಲ್ಲಿ ನಡೆದಿದೆ.ವಿಶ್ವನಾಥ ಚಿಗರಿ ಕೊಲೆ ಮಾಡಿದ ಆರೋಪಿ. ಲಕ್ಷ್ಮಿ ಕೊಲೆಯಾದ ಪತ್ನಿ. ಘಟನೆಯಲ್ಲಿ ಲಕ್ಷ್ಮಿಯ ತಾಯಿ ದೇವಕ್ಕ ಗಂಭೀರವಾಗಿ ಗಾಯಗೊಂಡಿದ್ದಾರೆ.ವಿಶ್ವನಾಥ ಚಿಗರಿ ಹಾಗೂ ನರಗುಂದ ತಾಲೂಕಿನ ಕಲಕೇರಿ ಗ್ರಾಮದ ಲಕ್ಷ್ಮಿ 2010ರಲ್ಲಿ ವಿವಾಹವಾಗಿದ್ದರು. ಲಕ್ಷ್ಮಿ ಹೆಚ್ಚಾಗಿ ತವರು ಮನೆಗೆ ಹೋಗುತ್ತಿದ್ದಳು. ಈ ವಿಚಾರವಾಗಿ ವಿಶ್ವನಾಥ ಲಕ್ಷ್ಮಿ ನಡುವೆ ಆಗಾಗ ಜಗಳವಾಗುತಿತ್ತು. ಅಷ್ಟೇ ಅಲ್ಲದೆ ಕಲಕೇರಿ ಗ್ರಾಮದಲ್ಲಿ ಲಕ್ಷ್ಮಿ ಬೇರೊಬ್ಬನ ಜೊತೆಗೆ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನ ವಿಶ್ವನಾಥನಲ್ಲಿ ಮೂಡಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.ಸದ್ಯ ಆರೋಪಿಯನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!